ಬೆಂಗಳೂರು : ಮಾಜಿ ಸಂಸದ ಡಿಕೆ ಸುರೇಶ್ ಸಹೋದರಿ ಎಂದು ಹೇಳಿಕೊಂಡು ಕೋಟ್ಯಂತರ ರೂಪಾಯಿ ವಂಚನೆ ಎಸಗಿರುವ ಐಶ್ವರ್ಯ ಗೌಡ ಕೇಸ್ ಸಂಬಂಧಿಸಿದಂತೆ ಪೊಲೀಸರಿಂದಲೇ ಸಿಡಿಆರ್ ಪಡೆದಿರುವ ಆರೋಪದ ಹಿನ್ನೆಲೆಯಲ್ಲಿ ಐಶ್ವರ್ಯ ಗೌಡ ಹೈಕೋರ್ಟ್ ನಿಂದ ಪ್ರಕರಣಕ್ಕೆ ತಡೆಯಾಜ್ಞೆ ತಂದಿದ್ದಾರೆ.ಪ್ರಕರಣದ ತನಿಖೆ ನಡೆಸಿದಂತೆ ಹೈಕೋರ್ಟ್ ಇಂದ ಇದೀಗ ತಡೆಯಾಜ್ಞೆ ತಂದಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣ ಹಿನ್ನೆಲೆ
ಪೊಲೀಸ್ ಅಧಿಕಾರಿಗಳಿಂದಲೇ ಸಿಡಿಆರ್ ಪಡೆದ ಆರೋಪದ ಹಿನ್ನೆಲೆಯಲ್ಲಿ,ಈಗಾಗಲೇ ಎಸಿಪಿ ಚಂದನ್ ಕುಮಾರ್ ನೋಟಿಸ್ ನೀಡಿದ್ದು, ಆಕೆಯ ಕಾಲ್ ಡಿಟೇಲ್ ಆಧರಿಸಿ ಮತ್ತು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಿದ್ದಾರೆ. ಇಂದು ವಿಚಾರಣೆಗೆ ಐಶ್ವರ್ಯ ಗೌಡ ಹಾಜರಾಗುವ ಸಾಧ್ಯತೆ ಇದೆ. ಎಸಿಪಿ ಚಂದನ್ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ವಿಚಾರಣೆಗೆ ಐಶ್ವರ್ಯಗೌಡ ಹಾಜರಾಗುವ ಸಾಧ್ಯತೆ ಇತ್ತು
ಅಕ್ರಮವಾಗಿ ಐಶ್ವರ್ಯ ಗೌಡ ಹಲವರ ಸಿಡಿಆರ್ ಪಡೆದಿದ್ದ ಆರೋಪ ಹಿನ್ನೆಲೆಯಲ್ಲಿ 2022 ಮಾರ್ಚ್ ನಿಂದ 2024ರ ನವೆಂಬರ್ ವರೆಗೆ ಐಶ್ವರ್ಯ ಗೌಡ ಹಲವರ ಸಿಡಿಆರ್ ಪಡೆದ ಆರೋಪ ಕೇಳಿ ಬಂದಿದೆ. ಈ ಕುರಿತು ಎಸಿಪಿ ಭರತ್ ರೆಡ್ಡಿ ಬ್ಯಾಟರಾಯನಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ನಡೆಸುತ್ತಿದ್ದಾರೆ ಐಶ್ವರ್ಯ ವಿಚಾರಣೆ ಬೆನ್ನಲ್ಲೇ ಸದ್ಯ ಕೆಲ ಇನ್ಸ್ಪೆಕ್ಟರ್ ಗಳಿಗೆ ನಡುಕ ಶುರುವಾಗಿದೆ ಸಿಡಿಆರ್ ತೆಗೆದುಕೊಂಡಿದ್ದ ಅಧಿಕಾರಿಗಳಿಗೆ ಇದೀಗ ಕಠಿಣ ಕ್ರಮ ಆಗುವ ಭಯ ಶುರುವಾಗಿದೆ ಐಶ್ವರ್ಯ ಸಂಪರ್ಕದಲ್ಲಿದ್ದ ಪೊಲೀಸ್ ಅಧಿಕಾರಿಗಳೇ ಸಿಡಿಆರ್ ತೆಗೆಸಿರುವ ಶಂಕೆ ಇದೀಗ ವ್ಯಕ್ತವಾಗುತ್ತಿದೆ.
ನಾಲ್ವರ ಸಿಡಿಆರ್ ಪಡೆದುಕೊಂಡ ಸಂಬಂಧ ಎಫ್‌ಐಆರ್ ದಾಖಲಾದ ಬೆನ್ನಲ್ಲೇ, ಸಿಡಿಆರ್ ಪಡೆದ ಪ್ರಕರಣದ ತನಿಖೆಗಾಗಿಯೇ ಹೊಸ ತನಿಖಾಧಿಕಾರಿಯನ್ನು ನೇಮಕ ಮಾಡಲಾಗಿತ್ತು. ಎಸಿಪಿ ಚಂದನ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು, ಪ್ರಾಥಮಿಕ ತನಿಖೆಯಲ್ಲಿ ಐಶ್ವರ್ಯಗೌಡ ರಾಮನಗರದ ಹಲವು ರಾಜಕೀಯ ಮುಖಂಡರ ಸಿಡಿಆರ್ ಕಲೆಕ್ಟ್ ಮಾಡಿರೋದು ಗೊತ್ತಾಗಿದೆ.