ಬೆಂಗಳೂರು : ರೈಲಿನಲ್ಲಿ ಕುಳಿತುಕೊಳ್ಳಲು ಸೀಟ್ ಗಾಗಿ ಗಲಾಟೆ ನಡೆದಿದೆ. ಈ ವೇಳೆ ಚಲಿಸುತ್ತಿದ್ದ ರೈಲಿನಿಂದಲೇ ಇಬ್ಬರೂ ವ್ಯಕ್ತಿಯೊಬ್ಬನನ್ನು ತಳ್ಳಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಯಶವಂತಪುರ ಬೀದರ್ ರೈಲಿನಲ್ಲಿ ಈ ಒಂದು ಘಟನೆ ನಡೆದಿದೆ.
ಹೌದು ಸೀಟ್ನಲ್ಲಿ ಕುಳಿತುಕೊಳ್ಳುವ ವಿಚಾರಕ್ಕೆ ಗಲಾಟೆ ಆಗಿ ವ್ಯಕ್ತಿಯ ಕೊಲೆಯಾಗಿದೆ. ಯಲಹಂಕ ಗೌರಿಬಿದನೂರು ರೇಂಜ್ನಲ್ಲಿದ್ದಾಗ ಈ ಒಂದು ಭೀಕರವಾದ ಕೊಲೆ ನಡೆದಿದೆ ಫೆಬ್ರುವರಿ 11 ರಂದು ರೈಲಿನಿಂದ ತಳ್ಳಿ ಇಬ್ಬರು ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ.
ಮೃತ ವ್ಯಕ್ತಿಯ ಗುರುತು ಇನ್ನೂವರೆಗೂ ಪತ್ತೆಯಾಗಿಲ್ಲ
ಘಟನೆಯ ಕುರಿತಂತೆ ಈ ಬಗ್ಗೆ ರೈಲ್ವೆ ಪೊಲೀಸರಿಗೆ ಪ್ರಯಾಣಿಕರು ಮಾಹಿತಿ ನೀಡಿದ್ದರು. ಪ್ರಯಾಣಿಕರ ಮಾಹಿತಿಯ ಮೇರೆಗೆ ರೇಲ್ವೆ ಪೊಲೀಸರು ಇಬ್ಬರು ಆರೋಪಿಗಳನ್ನು ಇದೀಗ ಅರೆಸ್ಟ್ ಮಾಡಿದ್ದಾರೆ. ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.