ಬೆಂಗಳೂರು : ಬೆಂಗಳೂರಿನ ಯಲಹಂಕದ ವಾಯು ನೆಲೆಯಲ್ಲಿ ಏರ್ ಶೋ 2025 ನಡೆಯುತ್ತಿದ್ದು, ಈ ಒಂದು ಏರ್ ಶೋ ವೀಕ್ಷಣೆಗೆ ಸಾರ್ವಜನಿಕರಿಗೆ ಇಂದು ಮತ್ತು ನಾಳೆ ಅವಕಾಶ ಕಲ್ಪಿಸಲಾಗಿದೆ.
ಹೌದು ಯಲಹಂಕದ ಬಳಿ ಇರುವ ವಾಯು ನೆಲೆಯಲ್ಲಿ ನಡೆಯುತ್ತಿರುವ ಏರ್ ಶೋ ವೀಕ್ಷಣೆಗೆ ಸಾರ್ವಜನಿಕರಿಗೆ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಅವಕಾಶ ಕಲ್ಪಿಸಲಾಗಿದೆ. ಈ ಒಂದು ಏರ್ ಶೋಗೆ ಟಿಕೆಟ್ ಪಡೆದುಕೊಂಡವರಿಗೆ ಮಾತ್ರ ಏರ್ ಶೋ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಕಳೆದ ಹೆಬ್ರಿ ಹತ್ತರಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು 15ನೇ ಏರ್ ಶೋ ಗೆ ಚಾಲನೆ ನೀಡಿದ್ದರು. ಸುಮಾರು 30 ರಾಷ್ಟ್ರಗಳ ರಕ್ಷಣಾ ಸಚಿವರು ಈ ಒಂದು ಏರ್ ಶೋದಲ್ಲಿ ಭಾಗಿಯಾಗಿದ್ದರು. ಇದೀಗ ಸಾರ್ವಜನಿಕರಿಗೆ ಕೂಡ ಏರ್ ಶೋ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.