ಕಲಬುರ್ಗಿ : ಗ್ರಾಂ. ಪಂಚಾಯತಿ ಸದಸ್ಯನಿಂದಲೇ ಲಂಚಕ್ಕೆ ಕೈವೊಡ್ಡಿದ ಅಧ್ಯಕ್ಷನನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಲೆಗೆ ಬೀಳಿಸಿರುವ ಘಟನೆ ಕಲಬುರ್ಗಿ ಜಿಲ್ಲೆಯ ಕಾಳಗಿ ಎಂಬಲ್ಲಿ ನಡೆದಿದೆ.
ಸದಸ್ಯನಿಂದಲೇ ಲಂಚ ಪಡೆಯುವಾಗ ಗ್ರಾಮ ಪಂಚಾಯತಿ ಅಧ್ಯಕ್ಷ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಕಾಳಗಿ ತಾಲೂಕಿನ ರಾಜಪುರ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ. ಗ್ರಾ.ಪಂ.ಅಧ್ಯಕ್ಷ ಪ್ರಕಾಶ್ ರೆಡ್ಡಿ ಎಂದು ತಿಳಿದು ಬಂದಿದೆ. ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ರಾಜಪುರ ಎಂಬ ಗ್ರಾಮ ಪಂಚಾಯತಿಯಲ್ಲಿ ಪ್ರಕಾಶ್ ರೆಡ್ಡಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ
ಸರ್ವೇ ನಂಬರ್ 4ರಲ್ಲಿ DCB ತೆರಿಗೆ ಹೆಸರು ನೋಂದಾಯಿಸಲು ಪ್ರಕಾಶ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಸದಸ್ಯ ಚಂದ್ರಶೇಖರ್ ಕಡೆಯಿಂದ 5 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬೆಲೆಗೆ ಬಿದ್ದಿದ್ದಾನೆ ಲೋಕಾಯುಕ್ತ ಇನ್ಸ್ಪೆಕ್ಟರ್ ಅಕ್ಕಮಹಾದೇವಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಸದ್ಯ ಪ್ರಕಾಶನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.