ಹಾವೇರಿ : ನಿಂದು ಇನ್ನೂ ಚಿಕ್ಕ ವಯಸ್ಸಿದೆ. ಚಿಕ್ಕವಯಸಲ್ಲಿ ತಮಗೂ ಸೇವನೆ ಮಾಡುವುದು ಒಳ್ಳೆಯದಲ್ಲ ಎಂದು ಬುದ್ಧಿ ಹೇಳಿದ್ದಕ್ಕೆ ಮನನೊಂದ ಯುವತಿ ಒಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ರೈಲ್ವೆ ಸ್ಟೇಷನ್ ಬಳಿ ನಡೆದಿದೆ.
ನೇಣಿಗೆ ಶರಣಾದ ಯುವತಿಯನ್ನು ಬೀಬಿಜಾನ್ ಸೊಂಡಿ (18) ಎಂದು ತಿಳಿದುಬಂದಿದೆ.ಮನೆಯವರು ತಂಬಾಕು ತಿನ್ನೋದು ಬಿಡು ಅಂತ ಬುದ್ಧಿವಾದ ಹೇಳಿದ್ದಕ್ಕೆ ಯುವತಿ ಬೀಬಿಜಾನ್ ನೇಣಿಗೆ ಶರಣಾಗಿದ್ದಾಳೆ.ಯುವತಿ ಕಳೆದ ಕೆಲವು ದಿನಗಳಿಂದ ತಂಬಾಕು ಸೇವನೆ ಚಟಕ್ಕೆ ಅಂಟಿಕೊಂಡಿದ್ದಳು. ತಂಬಾಕು ಸೇವನೆ ಮಾಡುವುದನ್ನು ಬಿಡುವಂತೆ ಬೀಬಿಜಾನ್ ಗೆ ತಂದೆ-ತಾಯಿ ಬುದ್ಧಿವಾದ ಹೇಳಿದ್ದರು.
ಮನೆಗೆಲಸ ಮಾಡುತ್ತಿದ್ದ ಬೇಬಿಜಾನ್ ನಾನು ದುಡಿಮೆ ಮಾಡಿ ನನ್ನ ಸ್ವಂತ ಹಣದಲ್ಲಿ ಖರ್ಚು ಮಾಡಲು ಅಪ್ಪ ಅಮ್ಮ ಬಿಡುತ್ತಿಲ್ಲ ಎಂದು ತಂದೆ ತಾಯಿಯೊಂ ದಿಗೆ ಬೇಬಿ ಜಾನ್ ಮತ್ತೆ ಜಗಳವಾಡಿದ್ದಾಳೆ.ನೀನಿನ್ನೂ ಚಿಕ್ಕವಳು. ನಿನ್ನ ಜೀವನದ ಆಯಸ್ಸು ತುಂಬಾ ಹೆಚ್ಚಾಗಿದೆ. ಆದ್ದರಿಂದ ತಂಬಾಕು ಸೇವನೆ ಬಿಟ್ಟು ನಿನ್ನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಂದೆ ತಾಯಿ ಬೈದು ಮತ್ತೊಮ್ಮೆ ಬುದ್ಧಿವಾದ ಹೇಳಿದ್ದಾರೆ. ಇದರಿಂದ ನೊಂದು ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ, ಘಟನೆ ಕುರಿತು ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.