ಬೆಂಗಳೂರು : ಬೆಂಗಳೂರಿನಲ್ಲಿ ಗಾಂಜಾ ಮಾರುತ್ತಿದ್ದ ಇಬ್ಬರೂ ರೌಡಿಶೀಟರ್ ಗಳನ್ನು ಅರೆಸ್ಟ್ ಮಾಡಲಾಗಿದ್ದು, ಬಂಧಿತರನ್ನು ಯೂಸುಫ್ ಶರೀಫ್ ಹಾಗೂ ಜಾಫರ್ ಸಾಧಿಕ್ ಅಲಿಯಾಸ್ ಚಪ್ಪರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 1.5 ಲಕ್ಷ ಮೌಲ್ಯದ 1.854 ಗ್ರಾಂ ಗಾಂಜಾ, 1 ಮೊಬೈಲ್ ಮತ್ತು 1 ಬೈಕ್ ಅನ್ನು ಜಪ್ತಿ ಮಾಡಿದ್ದಾರೆ. ಭವಾನಿ ನಗರದಲ್ಲಿ ಗಾಂಜಾ ಮಾರುತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಯೂಸುಫ್ ಶರೀಫ್ ನನ್ನ ಪೊಲೀಸರು ಬಂಧಿಸಿದ್ದಾರೆ. ನಂತರ A1 ಆರೋಪಿ ಯುಸುಫ್ ಮಾಹಿತಿ ಆಧಾರದ ಮೇಲೆ A2 ಆರೋಪಿ ಜಾಫರ್ ಸಾಧಿಕನ್ನು ಅರೆಸ್ಟ್ ಮಾಡಿದ್ದಾರೆ.
ಯೂಸುಫ್ ಶರೀಫ್ ವಿರುದ್ಧ ಹೊರ ರಾಜ್ಯಗಳಲ್ಲಿ 3 ಪ್ರಕರಣಗಳು ದಾಖಲಾಗಿದ್ದು, ರೌಡಿ ಶೀಟರ್ ಎಂದು ತಿಳಿದುಬಂದಿದೆ. A2 ಜಾಫರ್ ಸಾಧಿಕ್ ವಿಧಾನಸೌಧ ಠಾಣಾ ವ್ಯಾಪ್ತಿಯ ರೌಡಿಶೀಟರ್ ಎಂದು ತಿಳಿದುಬಂದಿದೆ. ಜಾಫರ್ ಸಾಧಿಕ್ ವಿರುದ್ಧ ಕೂಡ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 9 ಪ್ರಕರಣಗಳಿವೆ ಸದ್ಯ ಇಬ್ಬರನ್ನು ಬಂಧಿಸಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.