ಹಾಸನ : ಮನೆ ನಿರ್ಮಾಣಕ್ಕೆ 9 ಲಕ್ಷ ಮಾಡಿದ್ದ ಕುಟುಂಬವೊಂದು ಸಾಲ ಮರುಪಾವತಿ ಮಾಡದಿದ್ದಕ್ಕೆ ಫೈನಾನ್ಸ್ ಸಿಬ್ಬಂದಿಗಳು ಗೃಹ ಪ್ರವೇಶಕ್ಕೂ ಮುನ್ನವೆ ಹೊಸ ಮನೆಗೆ ಬೀಗ ಹಾಕಿರುವ ಅಮಾನವೀಯ ಘಟನೆ ಹಾಸನ ತಾಲೂಕಿನ ದೊಡ್ಡಆಲದಹಳ್ಳಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.
ಹಾಸನ ತಾಲೂಕಿನ ದೊಡ್ಡಆಲದಹಳ್ಳಿ ಗ್ರಾಮದಲ್ಲಿ ಮಂಜೇಗೌಡ ಎನ್ನುವವರು ಆಧಾರ್ ಹೌಸಿಂಗ್ ಫೈನಾನ್ಸ್ ನಿಂದ ಸಾಲ ಪಡೆದಿದ್ದರು. ಶಾಲಾ ಮರುಪಾವತಿ ಮಾಡದಿದ್ದಕ್ಕೆ ಫೈನಾನ್ಸ್ ಸಿಬ್ಬಂದಿಗಳು ಗೃಹಪ್ರವೇಶಕ್ಕೂ ಮುನ್ನವೆ ಬೀಗ ಹಾಕಿದ್ದಾರೆ. ಕಳೆದ ಆರು ತಿಂಗಳ ಹಿಂದೆಯೇ ಮನೆಗೆ ಬೀಗ ಹಾಕಿರುವ ಆರೋಪ ಇದೀಗ ಕೇಳಿ ಬರುತ್ತಿದೆ.
ಸದ್ಯ ಮನೆ ಇಲ್ಲದೆ ಕುಟುಂಬಸ್ಥರು ದನದ ಕೊಟ್ಟಿಗೆಯಲ್ಲಿ ಜೀವಿಸುತ್ತಿದ್ದಾರೆ. ಗೃಹ ಪ್ರವೇಶಕ್ಕೂ ಮುನ್ನವೇ ಮನೆಗೆ ಬೀಗ ಹಾಕಿ ಸಿಬ್ಬಂದಿ ದೌರ್ಜನ್ಯ ಎಸಗಿದ್ದಾರೆ. ಮನೆ ನಿರ್ಮಾಣದ ವೇಳೆ ಮಗನಿಗೆ ಅಪಘಾತವಾಗಿ ಕುಟುಂಬಸ್ಥರಿಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಹೀಗಾಗಿ ಸಾಲ ಕಟ್ಟಲಾಗದೆ ಕುಟುಂಬ ತೀವ್ರ ತೊಂದರೆ ಅನುಭವಿಸಿತ್ತು. ಕರುಣೆತೋರದೆ ಫೈನಾನ್ಸ್ ಸಿಬ್ಬಂದಿ ಇದೀಗ ಮನೆಗೆ ಬೀಗ ಹಾಕಿದ್ದಾರೆ.ಆರು ತಿಂಗಳಿನಿಂದ ಮಂಜೇಗೌಡ ಕುಟುಂಬ ದನದ ಕೊಟ್ಟಿಗೆಯಲ್ಲಿ ಜೀವನ ನಡೆಸುತ್ತಿದ್ದಾರೆ.