ಬೆಂಗಳೂರು : ಬೆಂಗಳೂರಿನಲ್ಲಿ ಉದ್ಯಮಿಗೆ ವಂಚಸಿದ ಐವರು ಆರೋಪಿಗಳನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಿಯಾದತ್ ಉಲ್ಲಾ, ಪ್ರತೀಕ್, ಉಮೇಶ್, ಸುಕ್ರೀತ್ ಹಾಗೂ ಜಾಕೀರ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಇನ್ನುಳಿದ ಇಬ್ಬರ ಬಂಧನಕ್ಕೆ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.
ಈ ಐವರು ಉದ್ಯಮಿಯೊಬ್ಬರಿಗೆ 37 ಲಕ್ಷ ರೂಪಾಯಿ ವಂಚನೆ ಎಸಗಿರುವ ಕುರಿತು ದೂರು ದಾಖಲಾಗಿತ್ತು. ಅಮೂಲ್ಯ ಲೋಹ ಅಮೆರಿಕದ ಕಂಪನಿಗೆ ಮಾರಾಟ ಮಾಡಲಾಗಿದೆ. ಇದಕ್ಕೆ ಅಮೆರಿಕಾದಿಂದ ಒಟ್ಟು 15 ಲಕ್ಷ ಕೋಟಿ ಫೈಲ್ ಬಾಕಿ ಇದೆ ಅದಕ್ಕೆ ತೆರಿಗೆ ಹಣವನ್ನು ಕಟ್ಟಿ ಬಿಡಿಸಬೇಕಿದೆ ಎಂದು ಆರೋಪಿಗಳು ಉದ್ಯಮಿಗೆ ತಿಳಿಸಿದ್ದಾರೆ.
ಇದಕ್ಕೆ ಸಹಾಯ ಮಾಡಿ 5% ನೀಡುವುದಾಗಿ ಈ ಒಂದು ಖರೀಮರ ಗ್ಯಾಂಗ್ ಉದ್ಯಮಿಗೆ ನಂಬಿಸಿತ್ತು. ಆರ್‌ಬಿಐ ಕೇಂದ್ರ ಸರ್ಕಾರ ಲ್ಯಾಬ್ ರಿಪೋರ್ಟ್ ಸಹ ಮಾಡಿಸಿಕೊಂಡಿದ್ದರು.ಇದೀಗ ಈ ಒಂದು ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರು ಐವರನ್ನು ಅರೆಸ್ಟ್ ಮಾಡಿದ್ದಾರೆ.