ಗ್ವಾಟೆಮಾಲಾ : ಅಮೆರಿಕದ ಗ್ವಾಟೆಮಾಲಾ ನಗರದ ಹೊರವಲಯದಲ್ಲಿ ಪ್ರಯಾಣಿಕರ ಬಸ್ ಸೇತುವೆಯಿಂದ ಉರುಳಿ ಬಿದ್ದಿದೆ. ಈ ಘಟನೆಯಲ್ಲಿ 55 ಜನರು ಸಾವನ್ನಪ್ಪಿದ್ದಾರೆ.
ಅಗ್ನಿಶಾಮಕ ದಳದ ಮುಖ್ಯಸ್ಥ ಎಡ್ವಿನ್ ವಿಲ್ಲಾಗ್ರಾನ್ ಅವರ ಪ್ರಕಾರ, ಹಲವಾರು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದವು, ನಂತರ ಬಸ್ ಸುಮಾರು 35 ಮೀಟರ್ ಆಳದ ಕಾಲುವೆಗೆ ಬಿದ್ದಿತು. ಬಸ್ಸಿನ ಅರ್ಧದಷ್ಟು ಭಾಗ ಕಾಲುವೆಗೆ ಮುಳುಗಿತು. ಇದರಿಂದಾಗಿ ಜನರಿಗೆ ಬಸ್ಸಿನಿಂದ ಇಳಿಯಲು ಅವಕಾಶ ಸಿಗಲಿಲ್ಲ.
ಗ್ವಾಟೆಮಾಲಾ ಮಧ್ಯ ಅಮೆರಿಕದ ದೇಶಗಳಲ್ಲಿ ಒಂದಾಗಿದೆ. 75 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್, ಎಲ್ ರಾಂಚೊ ಗ್ರಾಮದಿಂದ ಸ್ಯಾನ್ ಅಗಸ್ಟಿನ್‌ನ ಅಕಾಸಗುಜ್ಲಾನ್ ಪ್ರದೇಶಕ್ಕೆ ಪ್ರಯಾಣಿಸುತ್ತಿತ್ತು. ಬಸ್ ಬೆಲೀಜ್ ಸೇತುವೆಯನ್ನು ಸಮೀಪಿಸುತ್ತಿದ್ದಂತೆ, ಅದು ಮುಂಭಾಗದಲ್ಲಿ ಇದ್ದ ಕಾರಿಗೆ ಡಿಕ್ಕಿ ಹೊಡೆದು, ನಿಯಂತ್ರಣ ಕಳೆದುಕೊಂಡು 35 ಅಡಿ ಆಳದ ಕಂದಕಕ್ಕೆ ಬಿದ್ದಿತು.
ಈ ಅಪಘಾತದಲ್ಲಿ ಬಸ್‌ನಲ್ಲಿದ್ದ 55 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ರಕ್ಷಣಾ ಸಿಬ್ಬಂದಿಯ ಸಹಾಯದಿಂದ 10 ಜನರನ್ನು ರಕ್ಷಿಸಲಾಗಿದೆ. ಇತರರ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಬಿಡುಗಡೆ ಮಾಡಲಾಗಿಲ್ಲ. ಘಟನೆ ಕುರಿತು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ ಗ್ವಾಟೆಮಾಲಾ ಅಧ್ಯಕ್ಷರು, 3 ದಿನಗಳ ರಜೆ ಘೋಷಿಸಿದರು.