Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : CM ಸಿದ್ದರಾಮಯ್ಯಗೆ ಏಕವಚನದಲ್ಲಿ ನಿಂದನೆ ಆರೋಪ : ಮೈಸೂರು ಕೇಂದ್ರ ಕಾರಾಗೃಹ ವಾರ್ಡನ್ ಅರೆಸ್ಟ್.!

19/05/2025 9:53 AM

BREAKING : ಬೆಂಗಳೂರಿನಲ್ಲಿ ವರುಣಾರ್ಭಟಕ್ಕೆ ಜನರ ಪರದಾಟ : ಹಲವಡೆ ರಸ್ತೆಗಳು ಜಲಾವೃತವಾಗಿ ಟ್ರಾಫಿಕ್ ಜಾಮ್.!

19/05/2025 9:52 AM

ಸೆಕ್ಯುರಿಟಿ ಲೈಸೆನ್ಸ್ ರದ್ದು :ಇಂದು ದೆಹಲಿ ಹೈಕೋರ್ಟ್ ನಲ್ಲಿ ‘ಸೆಲೆಬಿ’ ಸಲ್ಲಿಸಿದ್ದ ಅರ್ಜಿ ವಿಚಾರಣೆ | Celebi

19/05/2025 9:50 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಇಂದು `ಇನ್ವೆಸ್ಟ್ ಕರ್ನಾಟಕ 2025′ ಉದ್ಘಾಟನೆ : 4 ದಿನಗಳ `ಹೂಡಿಕೆ ಉತ್ಸವ’ಕ್ಕೆ ಮುನ್ನುಡಿ.!
KARNATAKA

BIG NEWS : ಇಂದು `ಇನ್ವೆಸ್ಟ್ ಕರ್ನಾಟಕ 2025′ ಉದ್ಘಾಟನೆ : 4 ದಿನಗಳ `ಹೂಡಿಕೆ ಉತ್ಸವ’ಕ್ಕೆ ಮುನ್ನುಡಿ.!

By kannadanewsnow5711/02/2025 5:42 AM

ಬೆಂಗಳೂರು: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಇನ್ವೆಸ್ಟ್‌ ಕರ್ನಾಟಕ 2025ಕ್ಕೆ ಆತಿಥ್ಯ ವಹಿಸಲು ಕರ್ನಾಟಕ ರಾಜ್ಯ ಸರ್ಕಾರವು ಸಜ್ಜಾಗಿದ್ದು, ಫೆ.11 ರ ಮಧ್ಯಾಹ್ನ ನಡೆಯಲಿರುವ ಭವ್ಯ ಉದ್ಘಾಟನಾ ಸಮಾರಂಭವು ನಾಲ್ಕು ದಿನಗಳ ಹೂಡಿಕೆ ಉತ್ಸವಕ್ಕೆ ಮುನ್ನುಡಿ ಬರೆಯಲಿದೆ.

ʼಈ ಹೂಡಿಕೆದಾರರ ಸಮಾವೇಶವು, ಕರ್ನಾಟಕವನ್ನು ಜಾಗತಿಕ ಬಂಡವಾಳ ಹೂಡಿಕೆಯ ಶಕ್ತಿಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ನೆರವಾಗಲಿದೆ. ನಾವೀನ್ಯತೆ, ಕೈಗಾರಿಕಾ ಪ್ರಗತಿ ಮತ್ತು ಜಾಗತಿಕ ಪಾಲುದಾರಿಕೆಗೆ ರಾಜ್ಯದಲ್ಲಿನ ಸೌಲಭ್ಯಗಳನ್ನು ಇಡೀ ವಿಶ್ವಕ್ಕೆ ಪರಿಚಯಿಸಲಿದೆʼ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ಹೇಳಿದ್ದಾರೆ.

ಉದ್ದಿಮೆ, ನೀತಿ ನಿರೂಪಣೆ ಹಾಗೂ ನಾವೀನ್ಯತೆ ಕ್ಷೇತ್ರದ ದಿಗ್ಗಜರ ಸಮಾಗಮಕ್ಕೆ, ಚಿಂತನ ಮಂಥನಕ್ಕೆ ಇದು ವೇದಿಕೆ ಒದಗಿಸಲಿದೆ. ವಿವಿಧ ಕ್ಷೇತ್ರಗಳ ದಿಗ್ಗಜರು ಕರ್ನಾಟಕದಲ್ಲಿನ ಬಂಡವಾಳ ಹೂಡಿಕೆ ಮತ್ತು ಕೈಗಾರಿಕಾ ಪ್ರಗತಿಯ ಭವಿಷ್ಯ ರೂಪಿಸಲು ತಮ್ಮ ಒಳನೋಟಗಳನ್ನು ನೀಡಲಿದ್ದಾರೆ.
ಸಮಾವೇಶದ ವಿವಿಧ ಕಾರ್ಯಕ್ರಮಗಳ ವಿವರ ಹೀಗಿದೆ:

ಮೊದಲ ದಿನ. ಫೆಬ್ರುವರಿ 12:

* ಬೆಳಿಗ್ಗೆ 10:35 – 11:05 | ಸಭಾಂಗಣ ಎ | ಸಂವಾದ ಕಾರ್ಯಕ್ರಮ – ಕೃತಕ ಬುದ್ಧಿಮತ್ತೆ, ಸೈಬರ್ ಸುರಕ್ಷತೆ ಮತ್ತು ಸರ್ಕಾರ: ಅನಿಶ್ಚಿತ ಜಗತ್ತಿನಲ್ಲಿ ಡಿಜಿಟಲ್ ಕ್ಷಮತೆ ನಿರ್ಮಾಣ (AI, Cybersecurity, and Government: Building Digital Resilience in an Uncertain World)
ಭಾಷಣಕಾರರು: ಸೈಮನ್ ಲಾಂಗ್ (ದಿ ಎಕನಾಮಿಸ್ಟ್-ನ ಸಂಪಾದಕ)
ಕಾರ್ಯಕ್ರಮ ನಿರೂಪಣೆ: ಆನ್ ಡಂಕಿನ್ (ಅಮೆರಿಕದ ಇಂಧನ ಇಲಾಖೆಯ ಮಾಜಿ ಸಿಐಒ)

* ಮಧ್ಯಾಹ್ನ 12:00 ರಿಂದ 1:00 | ಸಭಾಂಗಣ ಎ | ಸಂವಾದ ಕಾರ್ಯಕ್ರಮ – ಕ್ಷಮತೆಯ ಮಾರ್ಗೋಪಾಯಗಳು: ಜಾಗತಿಕ ಸವಾಲುಗಳ ಮಧ್ಯೆ ಭಾರತದ ಆರ್ಥಿಕ ಬೆಳವಣಿಗೆ ಸಾಧಿಸುವುದು (Resilient Pathways: Charting India’s Economic Growth Amid Global Challenges)
ಮುಖ್ಯ ಭಾಷಣ: ಮೊಂಟೆಕ್ ಸಿಂಗ್ ಅಹ್ಲುವಾಲಿಯಾ (ಭಾರತದ ಅರ್ಥಶಾಸ್ತ್ರಜ್ಞ, ಭಾರತದ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ)
ಕಾರ್ಯಕ್ರಮ ನಿರ್ವಹಣೆ: ಸಲ್ಮಾನ್ ಸೋಜ್ (ಅರ್ಥಶಾಸ್ತ್ರಜ್ಞ ಮತ್ತು ಲೇಖಕ)

* ಮಧ್ಯಾಹ್ನ 2:00 ರಿಂದ 3:00 | ಸಭಾಂಗಣ ಎ | ಸಂವಾದ ಕಾರ್ಯಕ್ರಮ: ಭವಿಷ್ಯಕ್ಕೆ ನಾವೀನ್ಯತೆ (Innovating the Future)
ಮುಖ್ಯ ಭಾಷಣ: ಅಕಿಸ್ ಇವಾಂಜೆಲಿಡಿಸ್ (ನಥಿಂಗ್‌-ನ ಸಹ-ಸಂಸ್ಥಾಪಕ ಮತ್ತು ಮಾರಾಟ ಮುಖ್ಯಸ್ಥ,) ಕಾರ್ಯಕ್ರಮ ನಿರೂಪಣೆ: ಶಿವ್ ಅರೂರ್ (ಭಾರತದ ಪತ್ರಕರ್ತ ಮತ್ತು ಬರಹಗಾರ)

* ಮಧ್ಯಾಹ್ನ 4:30 ರಿಂದ 5:30 | ಸಭಾಂಗಣ ಎ |
ತಜ್ಞರ ಸಮೂಹ ಚರ್ಚೆ – ಮುಂದಾಳತ್ವ: ಭಾರತದ ಭವಿಷ್ಯ ರೂಪಿಸುತ್ತಿರುವ ಯುವ ನಾವೀನ್ಯಕಾರರು (Leading the Charge: Young Innovators Shaping India’s Future)

ಭಾಷಣಕಾರರು: ಪಾರ್ಥ್ ಜಿಂದಾಲ್ ( ಜೆಎಸ್‌ಡಬ್ಲ್ಯು ಸಿಮೆಂಟ್‌ನ ವ್ಯವಸ್ಥಾಪಕ ನಿರ್ದೇಶಕ), ಜಯ್‌ ಕೋಟಕ್ (ಕೋಟಕ್‌811-ನ ಸಹ-ಮುಖ್ಯಸ್ಥ), ಸುಜನ್ನಾಹ ಮುತ್ತೂಟ್ (ಮುತ್ತೂಟ್ ಹೌಸಿಂಗ್ ಫೈನಾನ್ಸ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕಿ)
ಕಾರ್ಯಕ್ರಮ ನಿರೂಪಣೆ: ನಿಖಿಲ್ ಕಾಮತ್ (ಜಿರೋಧಾ, ಟ್ರೂ ಬಿಯಕಾನ್, ಗೃಹಸ್-ನ ಸಹ-ಸಂಸ್ಥಾಪಕ)

ದಿನ 2 – ಫೆಬ್ರುವರಿ 13, 2025

* ಬೆಳಿಗ್ಗೆ 11:05 ರಿಂದ 11:45 | ಸಭಾಂಗಣ ಎ | ಸಂವಾದ ಕಾರ್ಯಕ್ರಮ– ಕೃತಕ ಬುದ್ಧಿಮತ್ತೆ ಸೀಮಾರೇಖೆ: ದೈತ್ಯ ಜಿಗಿತದಿಂದ ನೈಜ-ಪ್ರಪಂಚದ ಪ್ರಭಾವಗಳವರೆಗೆ (Pioneering the AI Frontier: From Moonshots to Real-World Impact
)

* ಭಾಷಣಕಾರರು: ಸೆಬಾಸ್ಟಿಯನ್ ಥ್ರನ್ (ಗೂಗಲ್‌ ಎಕ್ಸ್‌ನ ಸ್ಥಾಪಕ), ಪ್ರಶಾಂತ್ ಪ್ರಕಾಶ್ (ಆ್ಯಕ್ಸೆಲ್ ಪಾರ್ಟನರ್ಸ್‌ನ ಸ್ಥಾಪಕ ಪಾಲುದಾರ)
ಕಾರ್ಯಕ್ರಮ ನಿರೂಪಣೆ: ಮಿಷೆಲ್ ಹೆನ್ನೆಸ್ಸಿ (ದಿ ಎಕನಾಮಿಸ್ಟ್‌ನ ಗ್ರಾಫಿಕ್ ಡಿಟೆಲ್‌ ಸಂಪಾದಕ)

* ಮಧ್ಯಾಹ್ನ 4:30 – 5:30 | ಸಭಾಂಗಣ ಎ | ಗುಂಪು ಚರ್ಚೆ – ವೈವಿಧ್ಯಮಯ ಪಥಗಳಿಂದ ಸಾಮಾನ್ಯ ಗುರಿಯವರೆಗೆ (From Diverse Paths to a Common Goal
)
ಭಾಷಣಕಾರರು: ಕಿರಣ್ ರಾವ್ (ಚಲನಚಿತ್ರ ನಿರ್ದೇಶಕಿ, ನಿರ್ಮಾಪಕಿ ಮತ್ತು ಬರಹಗಾರ್ತಿ), ಐರಿನಾ ಘೋಸ್ (ಮೈಕ್ರೋಸಾಫ್ಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ), ಸುಖಿ ಸಿಂಗ್ (ಸುಖೀಸ್ ಗೌರ್ಮೆಟ್ ಫುಡ್ಸ್ನ ಸಂಸ್ಥಾಪಕಿ)
ಕಾರ್ಯಕ್ರಮ ನಿರೂಪಣೆ: ಲಕ್ಷ್ಮಿ ಪ್ರತುರಿ (ಇಂಕ್ಟಾಲ್ಕ್ಸ್ ಸಂಸ್ಥಾಪಕಿ ಮತ್ತು ಸಿಇಒ)

ದಿನ 3 – ಫೆಬ್ರುವರಿ 14, 2025:

* ಬೆಳಿಗ್ಗೆ 10:30 ರಿಂದ 11:30 | ಸಭಾಂಗಣ ಎ | ಸಂವಾದ ಕಾರ್ಯಕ್ರಮ- ಪ್ರಕ್ಷುಬ್ಧತೆಯಲ್ಲಿ ಅಭಿವೃದ್ಧಿ ಸಾಧಿಸುವುದು: ದೇಶಗಳು ಶಾಶ್ವತ ಕ್ಷಮತೆ ಹೇಗೆ ನಿರ್ಮಿಸಬಹುದು (Thriving in Turbulence: How Nations Can Build Lasting Resilience
)
ಭಾಷಣಕಾರರು: ಜಾರ್ಜ್ ಪಪಂಡ್ರಿಯೊ (ಗ್ರೀಸ್‌ನ ಮಾಜಿ ಪ್ರಧಾನಿ), ಶಶಿ ತರೂರ್ (ಲೋಕಸಭಾ ಸದಸ್ಯ) ಕಾರ್ಯಕ್ರಮ ನಿರೂಪಣೆ: ಲಕ್ಷ್ಮಿ ಪ್ರತುರಿ (ಇಂಕ್ಟಾಲ್ಕ್ಸ್ ಸಂಸ್ಥಾಪಕಿ ಮತ್ತು ಸಿಇಒ)‌

ಕರ್ನಾಟಕದ ಭವಿಷ್ಯಕ್ಕೆ ದೂರದೃಷ್ಟಿಯ ಮಾರ್ಗಸೂಚಿ

ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ 2025 ಕೈಗಾರಿಕಾ ಬೆಳವಣಿಗೆ, ನಾವೀನ್ಯತೆ ಮತ್ತು ಜಾಗತಿಕ ಸಹಯೋಗ ಬೆಳೆಸುವ ರಾಜ್ಯದ ಬದ್ಧತೆಗೆ ನಿದರ್ಶನವಾಗಿದೆ.

ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಜೊತೆಗಿನ ಒಪ್ಪಂದಗಳ ಮೂಲಕ ಶೈಕ್ಷಣಿಕ ಹಾಗೂ ಉದ್ಯಮದ ಪಾಲುದಾರಿಕೆಗಳನ್ನು ಬಲಪಡಿಸುವಂತಹ ಪ್ರಮುಖ ಉಪಕ್ರಮಗಳನ್ನು ಮುನ್ನಡೆಸುವಲ್ಲಿ ಸಚಿವ ಪಾಟೀಲ್ ಪ್ರಮುಖ ಪಾತ್ರ ವಹಿಸಿದ್ದಾರೆ.

ಕರ್ನಾಟಕವು ಅತ್ಯಾಧುನಿಕ ಕೈಗಾರಿಕೆಗಳಲ್ಲಿ ಜಾಗತಿಕವಾಗಿ ಮುಂಚೂಣಿ ಸ್ಥಾನದಲ್ಲಿ ಮುಂದುವರೆಯುವುದನ್ನು ಖಚಿತಪಡಿಸಿಕೊಳ್ಳಲು ಇವರು ಕ್ವಿನ್‌ ಸಿಟಿ ಉಪಕ್ರಮವನ್ನು ಮುನ್ನಡೆಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ.

ಈ ಶೃಂಗಸಭೆಯು, ವಿವಿಧ ಕೈಗಾರಿಕಾ ವಲಯಗಳಲ್ಲಿ ಜಾಗತಿಕ ಪಾಲುದಾರಿಕೆ ಬೆಳೆಸುವುದರ ಜೊತೆಗೆ, ನಾವೀನ್ಯತೆ ಮತ್ತು ಹೂಡಿಕೆ ಕೇಂದ್ರವಾಗಿರುವ ಕರ್ನಾಟಕದ ಮಹತ್ವವನ್ನು ಇಡೀ ವಿಶ್ವಕ್ಕೆ ಪರಿಚಯಿಸಲಿದೆ.

ಸಮಾವೇಶದ ಕಾರ್ಯಕ್ರಮಗಳ ವಿವರಗಳಿಗೆ https://investkarnataka.co.in/gim2025/events-schedule/ ಭೇಟಿ ನೀಡಿ.

BIG NEWS: 'INVEST Karnataka 2025' to be inaugurated today: Introduction to 4-day 'Investment Festival'
Share. Facebook Twitter LinkedIn WhatsApp Email

Related Posts

BREAKING : CM ಸಿದ್ದರಾಮಯ್ಯಗೆ ಏಕವಚನದಲ್ಲಿ ನಿಂದನೆ ಆರೋಪ : ಮೈಸೂರು ಕೇಂದ್ರ ಕಾರಾಗೃಹ ವಾರ್ಡನ್ ಅರೆಸ್ಟ್.!

19/05/2025 9:53 AM1 Min Read

BREAKING : ಬೆಂಗಳೂರಿನಲ್ಲಿ ವರುಣಾರ್ಭಟಕ್ಕೆ ಜನರ ಪರದಾಟ : ಹಲವಡೆ ರಸ್ತೆಗಳು ಜಲಾವೃತವಾಗಿ ಟ್ರಾಫಿಕ್ ಜಾಮ್.!

19/05/2025 9:52 AM2 Mins Read

BREAKING : ಮತ್ತೊಂದು ಭೀಕರ ರಸ್ತೆ ಅಪಘಾತ : ಕಾರು ಬಾವಿಗೆ ಉರುಳಿ ಬಿದ್ದು ಚಿಕ್ಕಬಳ್ಳಾಪುರದ ಮೂವರು ಸಾವು!

19/05/2025 9:18 AM1 Min Read
Recent News

BREAKING : CM ಸಿದ್ದರಾಮಯ್ಯಗೆ ಏಕವಚನದಲ್ಲಿ ನಿಂದನೆ ಆರೋಪ : ಮೈಸೂರು ಕೇಂದ್ರ ಕಾರಾಗೃಹ ವಾರ್ಡನ್ ಅರೆಸ್ಟ್.!

19/05/2025 9:53 AM

BREAKING : ಬೆಂಗಳೂರಿನಲ್ಲಿ ವರುಣಾರ್ಭಟಕ್ಕೆ ಜನರ ಪರದಾಟ : ಹಲವಡೆ ರಸ್ತೆಗಳು ಜಲಾವೃತವಾಗಿ ಟ್ರಾಫಿಕ್ ಜಾಮ್.!

19/05/2025 9:52 AM

ಸೆಕ್ಯುರಿಟಿ ಲೈಸೆನ್ಸ್ ರದ್ದು :ಇಂದು ದೆಹಲಿ ಹೈಕೋರ್ಟ್ ನಲ್ಲಿ ‘ಸೆಲೆಬಿ’ ಸಲ್ಲಿಸಿದ್ದ ಅರ್ಜಿ ವಿಚಾರಣೆ | Celebi

19/05/2025 9:50 AM

ಉದ್ಯೋಗವಾರ್ತೆ : ಕ್ರೀಡಾ ಕೋಟಾದಡಿ `CISF’ ನಲ್ಲಿ ಹೆಡ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ | CISF Recruitment-2025

19/05/2025 9:36 AM
State News
KARNATAKA

BREAKING : CM ಸಿದ್ದರಾಮಯ್ಯಗೆ ಏಕವಚನದಲ್ಲಿ ನಿಂದನೆ ಆರೋಪ : ಮೈಸೂರು ಕೇಂದ್ರ ಕಾರಾಗೃಹ ವಾರ್ಡನ್ ಅರೆಸ್ಟ್.!

By kannadanewsnow5719/05/2025 9:53 AM KARNATAKA 1 Min Read

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಏಕವನದಲ್ಲಿ ನಿಂದನೆ ಆರೋಪದ ಹಿನ್ನೆಲೆಯಲ್ಲಿ ಮೈಸೂರು ಕೇಂದ್ರ ಕಾರಾಗೃಹದ ವಾರ್ಡನ್ ಎಸ್.ಬಿ. ಪುನೀತ್…

BREAKING : ಬೆಂಗಳೂರಿನಲ್ಲಿ ವರುಣಾರ್ಭಟಕ್ಕೆ ಜನರ ಪರದಾಟ : ಹಲವಡೆ ರಸ್ತೆಗಳು ಜಲಾವೃತವಾಗಿ ಟ್ರಾಫಿಕ್ ಜಾಮ್.!

19/05/2025 9:52 AM

BREAKING : ಮತ್ತೊಂದು ಭೀಕರ ರಸ್ತೆ ಅಪಘಾತ : ಕಾರು ಬಾವಿಗೆ ಉರುಳಿ ಬಿದ್ದು ಚಿಕ್ಕಬಳ್ಳಾಪುರದ ಮೂವರು ಸಾವು!

19/05/2025 9:18 AM

ALERT : ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಮನೆಯಲ್ಲಿರುವ ‘AC’ ಬಾಂಬ್ ನಂತೆ ಸ್ಪೋಟಗೋಳ್ಳಬಹುದು ಎಚ್ಚರ.!

19/05/2025 9:09 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.