ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯ ಪರೀಕ್ಷಕರ ಅಂತಿಮ ಪಟ್ಟಿ ಇನ್ನೆರಡು ದಿನಗಳಲ್ಲಿ ಪ್ರಕಟವಾಗುವುದಾಗಿ ನನಗೆ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಭರವಸೆ ನೀಡಿದ್ದಾರೆ ಎಂಬುದಾಗಿ ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.
ಇಂದು ತಮ್ಮ ಫೇಸ್ ಬುಕ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವಂತ ಅವರು, ಜನವರಿ 24ರಂದು ನಾನು ರಾಜ್ಯದ ಮುಖ್ಯಮಂತ್ರಿಗಳಿಗೆ, ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಿಗೆ, ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಗಳಿಗೆ. ಪತ್ರ ಒಂದನ್ನು ಬರೆದು #ವಾಣಿಜ್ಯ_ತೆರಿಗೆ_ಇಲಾಖೆಯ_ಪರಿವೀಕ್ಷಕರ (230 ಹುದ್ದೆಗಳು) ಪರೀಕ್ಷೆ ನಡೆದು ಸುಮಾರು ವರ್ಷಗಳಾದರೂ ಇನ್ನೂ ಅಂತಿಮ ಪಟ್ಟಿ ಬಿಡುಗಡೆಯಾಗದಿರುವ ಬಗ್ಗೆ ಪ್ರಸ್ತಾಪಿಸಿ ಬೇಗ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೆ ಎಂದಿದ್ದಾರೆ.
ಇಲ್ಲದಿದ್ದಲ್ಲಿ ಫೆಬ್ರವರಿ ಮೊದಲನೇ ವಾರದಲ್ಲಿ ಲೋಕ ಸೇವಾ ಆಯೋಗದ ಬಾಗಿಲನ್ನು ತಟ್ಟಿ ನ್ಯಾಯ ಕೇಳುವುದಾಗಿ ತಿಳಿಸಿದ್ದೆ. ಅದೇ ರೀತಿ ಇಂದು ನಾನು ಲೋಕಸೇವಾ ಆಯೋಗದ ಕಟ್ಟಡದ ಬಾಗಿಲು ತಟ್ಟಿ ಅಧ್ಯಕ್ಷರನ್ನು ಮತ್ತು ಕಾರ್ಯದರ್ಶಿಗಳನ್ನು ಭೇಟಿ ಮಾಡಿದೆ. ವಾಣಿಜ್ಯ ತೆರಿಗೆ ಇಲಾಖೆಯ ಪರೀಕ್ಷಕರ ಅಂತಿಮ ಪಟ್ಟಿ ಇನ್ನೆರಡು ದಿನಗಳಲ್ಲಿ ಪ್ರಕಟವಾಗುವುದಾಗಿ ನನಗೆ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಭರವಸೆ ನೀಡಿದ್ದಾರೆ ಎಂಬುದಾಗಿ ಹೇಳಿದ್ದಾರೆ.
ಇನ್ನುಳಿದಂತೆ
- A) ಸಹಕಾರ ಇಲಾಖೆಯ ಸಹಕಾರ ಸಂಘಗಳ ನಿಬಂಧಕರ ಕಛೇರಿಯಲ್ಲಿನ ಸಹಕಾರ ಸಂಘಗಳ 47 ನಿರೀಕ್ಷಕರ ಅಂತಿಮ ಆಯ್ಕೆ ಪಟ್ಟಿ
B ) ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ 242 ಲೆಕ್ಕ ಸಹಾಯಕರ ಅಂತಿಮ ಆಯ್ಕೆ ಪಟ್ಟಿ
- C) ವಾಣಿಜ್ಯ ತೆರಿಗೆ ಇಲಾಖೆಯಲ್ಲಿನ 15 ವಾಣಿಜ್ಯ ತೆರಿಗೆ ಪರಿವೀಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ
D ) ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ 67 ಕಿರಿಯ ಲೆಕ್ಕ ಸಹಾಯಕರ ತಾತ್ಕಾಲಿಕ ಆಯ್ಕೆ ಪಟ್ಟಿ ಹಾಗೂ
- E) ಸಹಕಾರ ಇಲಾಖೆಯಲ್ಲಿನ ಸಹಕಾರ ಸಂಘಗಳ 53 ಸಹಕಾರ ಸಂಘಗಳ ನಿರೀಕ್ಷೆದ ನಿರೀಕ್ಷಕರ ಅಂತಿಮ ಆಯ್ಕೆ ಪಟ್ಟಿಗಳನ್ನು ಇನ್ನು 15 ದಿವಸದ ಒಳಗಾಗಿ ಪ್ರಕಟ ಮಾಡುವುದಾಗಿ ಸಹ ತಿಳಿಸಿದ್ದಾರೆ.
ಉದ್ಯೋಗ ಸೌಧದ ಆಚೆ ಕಾದು ನಿಂತಿದ್ದ ಯುವ ನಿಯೋಗಕ್ಕೆ ನಾನು ಈ ಎಲ್ಲಾ ಮಾಹಿತಿಯನ್ನು ನೀಡಿದಾಗ ಹತಾಶಗೊಂಡಿದ್ದ ಅವರ ಮುಖದಲ್ಲಿ ವಿಶ್ವಾಸದ ನಗೆ ಮೂಡಿದ್ದನ್ನು ಕಂಡು ನನಗೆ ಸಂತೋಷವಾಯಿತು.
ಕಳೆದ ಆಗಸ್ಟ್ ತಿಂಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲಿದ ನಾನು ಜನವರಿ ತಿಂಗಳಿಂದ ವಿಧಾನಸೌಧದ ಅರ್ಜಿ ಸಮಿತಿ ಸಭೆಗೆ ಹೋಗುತ್ತಿರುವುದನ್ನು ಬಿಟ್ಟರೆ ಉದ್ಯೋಗಾಕಾಂಕ್ಷಿ ಯುವಜನತೆಯ ಪರವಾಗಿ ನಾನು ಕಳೆದ ಆರು ತಿಂಗಳಲ್ಲಿ ಹತ್ತಿದ ಮೊದಲನೇ ಮೆಟ್ಟಲುಗಳೆಂದರೆ ಇಂದಿನ ಉದ್ಯೋಗ ಸೌಧದ ಈ ಮೆಟ್ಟಲುಗಳು ಎಂಬುದಾಗಿ ತಿಳಿಸಿದ್ದಾರೆ.
Shocking News: ಆಸ್ಪತ್ರೆಯಲ್ಲಿ ಸತ್ತಿದ್ದಾನೆಂದು ಊರಿಗೆ ತರುವಾಗ ಬದುಕಿದ ವ್ಯಕ್ತಿ: ಶಾಕ್ ಆದ ಹಾವೇರಿ ಜನರು