ಮಂಗಳೂರು : 12 ವರ್ಷದ ಬಾಲಕನೊಬ್ಬನ ಎದೆಭಾಗಕ್ಕೆ ತೆಂಗಿನ ಗರಿ ಹಾಗೂ ಕುತ್ತಿಗೆಯಲ್ಲಿದ್ದ ಸರ ಹೊಕ್ಕಿಕೊಂಡಿರುವ ಘಟನೆ ಮಂಗಳೂರಲ್ಲಿ ನಡೆದಿದೆ. ಆತನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ವೈದ್ಯರು ಸುಮಾರು ಎರಡು ಗಂಟೆಗಳ ಕಾಲ ಆಪರೇಷನ್ ಮಾಡಿ ಬಾಲಕನ ಎದೆಯಲ್ಲಿದ್ದ ಗರಿ ಹಾಗೂ ಸರವನ್ನು ದೇಹದಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ವೈದ್ಯರ ಈ ಒಂದು ಕಾರ್ಯಕ್ಕೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಹೌದು ಆಟವಾಡು ತ್ತಿದ್ದ 12ರ ಹರೆಯದ ಬಾಲಕನ ಮೇಲೆ ತೆಂಗಿನ ಗರಿ ಬಿದ್ದು, ಅದರ ತುಂಡು ಹಾಗೂ ಆತ ತೊಟ್ಟಿದ್ದ ಚೈನ್ ಕೂಡ ಕುತ್ತಿಗೆ ಮೂಲಕ ಎದೆಯ ಒಳಗೆ ಸೇರಿದ ಘಟನೆ ಮಡಿಕೇರಿ ಯಲ್ಲಿ ಸಂಭವಿಸಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಗರಿ ಮತ್ತು ಸರವನ್ನು ಹೊರ ತೆಗೆಯಲಾಗಿದೆ.
ಘಟನೆ ಹಿನ್ನೆಲೆ?
ಅಸ್ಸಾಂ ಮೂಲದ ಬಾಲಕ ಕಮಲ್ ಹುಸೇನ್(12)ನ ಹೆತ್ತವರು ಮಡಿಕೇರಿಯ ಮನೆಯಲ್ಲಿ ಕಾರ್ಮಿಕ ರಾಗಿದ್ದರು. ಅವರು ಶನಿವಾರ ತೋಟ ದಲ್ಲಿ ಕೆಲಸ ಮಾಡುತ್ತಿದ್ದಾಗ ಬಾಲಕ ಪಕ್ಕದಲ್ಲಿ ಆಟವಾಡುತ್ತಿದ್ದ. ಈ ವೇಳೆ ತೆಂಗಿನ ಮರದ ಗರಿ ಬಾಲಕನ ಮೇಲೆ ಬಿದ್ದಿದೆ. ಅದರ ಒಂದು ಭಾಗ ಬಾಲಕನ ಕುತ್ತಿಗೆಯ ಮೂಲಕ ಎದೆಯ ಒಳಗಡೆ ಪ್ರವೇಶಿಸಿದೆ. ಈ ವೇಳೆ ಬಾಲಕನ ಕೊರಳಲ್ಲಿದ್ದ ಚೈನ್ ಕೂಡ ಕೊಂಬೆಗೆ ಸುತ್ತಿ ಒಳಗೆ ಸೇರಿದೆ.
ಕೂಡಲೇ ಸಿದ್ದವಾದ ಆಸ್ಪತ್ರೆ ಕಾರ್ಡಿಯೋಥೋರಾಸಿಕ್ ಮತ್ತು ವ್ಯಾಸ್ಕ್ಯುಲರ್ ಸರ್ಜರಿ ವಿಭಾಗದ ಸಂಪೂರ್ಣ ತಂಡವು ಡಾ. ಸುರೇಶ್ ಪೂ ನೇತೃತ್ವದಲ್ಲಿ ಮಧ್ಯರಾತ್ರಿ 1:30 ರಿಂದ 3:30 ರ ನಡುವೆ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ತೆಂಗಿನ ಗರಿ ಮತ್ತು ಸರವನ್ನು ಯಶಸ್ವಿಯಾಗಿ ಹೊರತೆಗೆದಿದೆ.ಬಾಲಕ ಈಗ ಚೇತರಿಸಿಕೊಳ್ಳುತ್ತಿದ್ದು, ಆತನ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಈ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಸರ್ಕಾರಿ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸಚಿವ ದಿನೇಶ್ ಗುಂಡೂರಾವ್ ಮೆಚ್ಚುಗೆ
ವೈದ್ಯರ ಕಾರ್ಯಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿನಂದನೆ ಸಲ್ಲಿಸಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾದ ಅಸ್ಸಾಂ ಮೂಲದ ಬಾಲಕ ಕಮಲ್ ಹುಸೇನ್ ಚೇತರಿಸಿಕೊಳ್ಳುತ್ತಿದ್ದಾನೆ. ಇಂತಹ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿದ ಡಾ. ಸುರೇಶ್ ಪೈ ನೇತೃತ್ವದ ವೈದ್ಯರ ತಂಡದ ಕಾರ್ಯ ಅಭಿನಂದನಾರ್ಹ. ಸಾರ್ವಜನಿಕರ ಸೇವೆಗೆ ಇರುವ ಸರ್ಕಾರಿ ಆಸ್ಪತ್ರೆಗಳನ್ನು ಮತ್ತಷ್ಟು ಅನುಕೂಲಕರವಾಗಿಸಲು ಮತ್ತು ಅತ್ಯುತ್ತಮ ಸೇವೆಗಳು ದೊರೆಯುವಂತೆ ಮೇಲ್ದರ್ಜೆಗೆ ಏರಿಸುವಲ್ಲಿ ನಮ್ಮ ಸರ್ಕಾರ ಸದಾ ಬದ್ಧವಾಗಿದೆ ಎಂದು ಸಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
https://twitter.com/dineshgrao/status/1888794173727535518?t=M76hH83LEHs9_Ry8cW5SRA&s=19