ಬೆಂಗಳೂರು : ಇಂದಿನಿಂದ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ನಡೆಯಲಿರುವ ಏರ್ ಶೋ ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದಾರೆ. ಈ ಒಂದು ಏರ್ ಶೋ ಕಾರ್ಯಕ್ರಮದಲ್ಲಿ ರಕ್ಷಣಾ ಇಲಾಖೆಯು ನಟ ಪುನೀತ್ ರಾಜಕುಮಾರ್ ಅವರ ಯುವರತ್ನ ಸಿನೆಮಾದ ‘ಪವರ್ ಆಫ್ ಯೂಥ್’ ಎಂಬ ಹಾಡನ್ನು ಪ್ಲೇ ಮಾಡಿತು.
ಹೌದು ಇಂದಿನಿಂದ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಏರ್ ಶೋ 2025ಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದು, ರಕ್ಷಣಾ ಸಚಿವರು ಬರುತ್ತಿದ್ದಂತೆ ಭಾರತದ ಯುದ್ಧ ವಿಮಾನಗಳ ಹಾರಾಟ ಆರಂಭವಾಯಿತು. ಮುಖ್ಯ ವೇದಿಕೆ ಮುಂಭಾಗದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಸೀನರಾಗಿದ್ದು, ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್, ವಾಯು ಸೇನೆಯ ಮುಖ್ಯಸ್ಥರು ಸೇರಿದಂತೆ ಹಲವರು ಗಣ್ಯರು ಭಾಗಿಯಾಗಿದ್ದಾರೆ.
ವಿಮಾನಗಳ ಹಾರಾಟ ಆರಂಭವಾಗುತ್ತಿದ್ದಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ ನಟನೆಯ ಯುವರತ್ನ ಸಿನಿಮಾದ ‘ಪವರ್ ಆಫ್ ಯೂಥ್’ ಹಾಡು ಹಾಕಿದ ರಕ್ಷಣಾ ಇಲಾಖೆ, ಫೆಬ್ರವರಿ 10 ರ ಇಂದಿನಿಂದ ಫೆಬ್ರವರಿ 14ರ ವರೆಗೆ ಈ ಒಂದು ಏರ್ ಶೋ ನಡೆಯಲಿದೆ. ಈಗಾಗಲೇ ಏರ್ ಶೋ ಗೆ ಸಕಲ ಸಿದ್ಧತೆಗಳನ್ನು ಮಾಡಿಕೊಡಲಾಗಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಫೆಬ್ರವರಿ 12ರವರೆಗೆ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.
ಏರೋ ಇಂಡಿಯಾದಲ್ಲಿ ಒಟ್ಟು 90 ದೇಶಗಳು, 30 ದೇಶಗಳ ರಕ್ಷಣಾ ಸಚಿವರು, 43 ರಾಷ್ಟ್ರಗಳ ಸೇನಾ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ. ಏರ್ ಶೋದಲ್ಲಿ 70 ಕ್ಕೂ ಹೆಚ್ಚು ಯುದ್ದ ವಿಮಾನ, ಸರಕು ,ತರಬೇತಿ ವಿಮಾನಗಳು ಪ್ರದರ್ಶನ ನೀಡಲಿವೆ. ಏರ್ ಶೋ ನೋಡಲು 5 ದಿನಗಳಲ್ಲಿ 7 ಲಕ್ಷ ಜರು ಆಗಮಿಸುವ ನಿರೀಕ್ಷೆ ಇದೆ. ಏರ್ ಶೋ 2025 ಫೆಬ್ರವರಿ 10ರಿಂದ ಫೆಬ್ರವರಿ 14ರ ವರೆಗೆ ಪ್ರತಿದಿನವೂ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ನಡೆಯಲಿದೆ. ಫೆಬ್ರವರಿ 13 ಹಾಗೂ 14ರಂದು ಸಾರ್ವಜನಿಕರಿಗೆ ಅವಕಾಶ ಇರಲಿದೆ.
ಈ ರೀತಿ ಏರ್ ಶೋ-2025 ಟಿಕೆಟ್ ಬುಕ್ ಮಾಡಿಕೊಳ್ಳಿ.!
ಭಾರತೀಯರಿಗೆ 2,500 ರೂಪಾಯಿ ಇದ್ದರೆ, ವಿದೇಶಿಗರಿಗೆ 50 ಯುಎಸ್ ಡಾಲರ್ ಇರಲಿದೆ.
ಎಡಿವಿಎ ಪಾಸ್: ಭಾರತೀಯರಿಗೆ 1,000 ರೂ
ವಿದೇಶಿಗರಿಗೆ 50 ಯುಎಸ್ ಡಾಲರ್
ವ್ಯಾಪಾರ ಪಾಸ್ : ಭಾರತೀಯರಿಗೆ 5,000 ರೂ.
ವಿದೇಶಿಗರಿಗೆ : 50 ಯುಎಸ್ ಡಾಲರ್ ಇರಲಿದೆ.
ಏರ್ ಶೋ 2025ರ ಟಿಕೆಟ್ ಬುಕ್ ಮಾಡುವುದು ಹೇಗೆ?
ನೀವು ಮೊದಲು ಏರೋ ಇಂಡಿಯಾದ ವೆಬ್‌ಸೈಟ್ aeroindia.gov.in ಅನ್ನು ಓಪನ್ ಮಾಡಬೇಕು
ವೆಬ್‌ಸೈಟ್‌ನ ಹೋಮ್ ಪೇಜ್‌ನಲ್ಲಿ ಟಿಕೆಟ್ಸ್ ಅಂತ ಕಾಣಿಸುತ್ತೆ. ಅಲ್ಲಿ ವಿಸಿಟರ್ಸ್ ರಿಜಿಸ್ಟ್ರೇಶನ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಯಾವ ಪಾಸ್ ಬೇಕು ಎಂದು ಆಯ್ಕೆ ಮಾಡಬೇಕು.
ನಿಮ್ಮ ಹೆಸರು ಹಾಗೂ ಮೊಬೈಲ್ ನಂಬರ್, ಅಗತ್ಯ ವಿವರಗಳನ್ನು ಆ್ಯಡ್ ಮಾಡಬೇಕು.
ಬಳಿಕ ಹಣ ಪಾವತಿ ಮಾಡಿ. ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದ್ರೆ ಟಿಕೆಟ್ ಬುಕ್ ಆಗಲಿದೆ.
#WATCH | Bengaluru, Karnataka | Defence Minister Rajnath Singh attends the Aero India 2025 being held at Yelahanka Air Force Station.
Aero India 2025 is scheduled to be held from February 10 to 14. Aero India 2025 is the 15th edition of Asia's top aerospace exhibition. pic.twitter.com/mbeG3jKZVj
— ANI (@ANI) February 10, 2025