ನವದೆಹಲಿ: ನಾಳೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವಂತ ಮಹಾ ಕುಂಭಮೇಳಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭೇಟಿ ನೀಡಲಿದ್ದಾರೆ. ಅಲ್ಲದೇ ಪುಣ್ಯ ಸ್ನಾನವನ್ನು ಮಾಡಲಿದ್ದಾರೆ.
ಈ ಸಂಬಂಧ ರಾಷ್ಟ್ರಪತಿ ಭವನದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ 10-02-2025ರಂದು ಉತ್ತರ ಪ್ರದೇಶದ ಪ್ರಯಾಗ್ ರಾಜ್ ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭೇಟಿ ನೀಡಲಿದ್ದಾರೆ ಎಂಬುದಾಗಿ ತಿಳಿಸಿದೆ.
ಮಹಾ ಕುಂಭಮೇಳದ ಪ್ರಯುಕ್ತ ಪ್ರಯಾಗ್ ರಾಜ್ ನಲ್ಲಿನ ಸಂಗಮ್ ಸ್ಥಳದಲ್ಲಿ ಪುಣ್ಯ ಸ್ನಾನ ಮಾಡಲಿದ್ದಾರೆ. ಅಕ್ಷಯವತ್, ಹನುಮ ಮಂದಿರ್ ಗೂ ಭೇಟಿ ನೀಡಲಿದ್ದಾರೆ. ಅಲ್ಲದೇ ಡಿಜಿಟಲ್ ಕುಂಭ ಅನುಭವ್ ಸೆಂಟರ್ ಗೂ ಭೇಟಿ ನೀಡಲಿದ್ದಾರೆ ಅಂತ ತಿಳಿಸಿದೆ.
BIG NEWS: ನಾಳೆಯಿಂದ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲು ಕುಂಭಮೇಳ ಆರಂಭ: ಭದ್ರತೆಗಾಗಿ 1,500 ಪೊಲೀಸರ ನಿಯೋಜನೆ
Crime News: ತವರು ಮನೆಗೆ ಮುನಿಸಿಕೊಂಡು ಹೋದ ಪತ್ನಿ: ಸಿಟ್ಟಾದ ಪತಿಯಿಂದ ಜಾಕುವಿನಿಂದ ಹಲ್ಲೆ