ಧಾರವಾಡ : ತವರು ಮನೆಗೆ ಹೋಗಿದ್ದಕ್ಕೆ ಪತಿಯೊಬ್ಬ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾನೆ. ಈ ವೇಳೆ ಜಗಳ ಬಿಡಿಸಲು ಬಂದಿದ್ದ ಅತ್ತೆಯ ಮೇಲು ಅಳಿಯ ಹಲ್ಲೆ ನಡೆಸಿರುವ ಘಟನೆ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.
ಪತ್ನಿ ರೂಪ ಅತ್ತೆ ಯಲ್ಲವ ಮೇಲೆ ಬಸವರಾಜ್ ಅವ್ವಣ್ಣನವರ್ ಎನ್ನುವ ವ್ಯಕ್ತಿ ಹಲ್ಲೆ ನಡೆಸಿದ್ದಾನೆ. ಧಾರವಾಡದ ಬನಶ್ರೀ ನಗರದಲ್ಲಿ ಈ ಒಂದು ದಂಪತಿಗಳು ವಾಸವಾಗಿದ್ದರು. ಪತ್ನಿಯ ಮೇಲೆ ಬಸವರಾಜ್ ಅವಣ್ಣನವರ್ ಅನುಮಾನ ಪಡುತ್ತಿದ್ದ ಪತಿ ಬಸವರಾಜನ ನಡೆಯಿಂದ ಪತ್ನಿ ರೂಪ ತೀವ್ರವಾಗಿ ಬೇಸತ್ತು ತವರಿಗೆ ಹೋಗಿದ್ದಳು. ಒಂದು ವಾರದ ಹಿಂದೆ ತವರು ಗರಗಕ್ಕೆ ರೂಪ ಬಂದಿದ್ದಾಳೆ.
ಇದರಿಂದ ಸಿಟ್ಟಿಗೆದ್ದು ಗ್ರಾಮಕ್ಕೆ ಬಂದು ಪತ್ನಿಯ ಮೇಲೆ ಬಸವರಾಜ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾನೆ.ಈ ವೇಳೆ ಜಗಳ ಬಿಡಿಸಲು ಬಂದಿದ್ದ ಅತ್ತೆ ಯಲ್ಲವ ಮೇಲು ಬಸವರಾಜ್ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದಂತಹ ರೂಪ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಪೊಲೀಸರು ಬಸವರಾಜ್ ಅವಣ್ಣನವರನ್ನು ಅರೆಸ್ಟ್ ಮಾಡಿದ್ದಾನೆ. ಧಾರವಾಡದ ಗರಗ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಾಗಿದೆ.