ಬೆಂಗಳೂರು : ಪ್ರಖ್ಯಾತ ಗಾಯಕ ಎಡ್ ಶೆರಾನ್ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ವ್ಯಾಪ್ತಿಯ ಚರ್ಚ್ ಸ್ಟ್ರೀಟ್ ಫುಟ್ಪಾತ್ ನಲ್ಲಿ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದರು. ಅನುಮತಿ ಇಲ್ಲದೆ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಅರ್ಧಕ್ಕೆ ಹಾಡು ನಿಲ್ಲಿಸಿ ಕಳುಹಿಸಿರುವ ಘಟನೆ ನಡೆದಿದೆ.
ಹೌದು ಪ್ರಖ್ಯಾತ ಗಾಯಕ ಎಡ್ ಶೆರಾನ್ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದರು. ಅನುಮತಿ ಇಲ್ಲದೆ ಈ ಒಂದು ಗಾಯಕ ಸಂಗೀತ ಹಾಡು ಹಾಡುತ್ತಿದ್ದ. ಈ ವೇಳೆ ಹೆಚ್ಚು ಜನ ಸೇರುತ್ತಿದ್ದಂತೆ ಮಧ್ಯದಲ್ಲಿ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಪೊಲೀಸರು ಅರ್ಧಕ್ಕೆ ಸಂಗೀತ ಕಾರ್ಯಕ್ರಮ ನಿಲ್ಲಿಸಿದ್ದಾರೆ.
ರಸ್ತೆ ಬದಿಯಲ್ಲಿ ಸಂಗೀತ ಕಾರ್ಯಕ್ರಮ ನಡೆಸಲು ಯಾವುದೆ ರೀತಿಯಾದ ಅನುಮತಿ ಎಡ್ ಶೆರಾನ್ ಯಾವುದೇ ಅನುಮತಿ ಪಡೆದಿರಲಿಲ್ಲ. ಫುಟ್ಪಾತ್ ನಲ್ಲಿ ಹಾಡು ಹಾಡುತ್ತಿದ್ದ ಹಾಗಾಗಿ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಅರ್ಧಕ್ಕೆ ಹಾಡು ನಿಲ್ಲಿಸಿ ಪೊಲೀಸರು ಅಲ್ಲಿಂದ ಕಳಿಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.