ದಾವಣಗೆರೆ : ಬಿಎಸ್ ಯಡಿಯೂರಪ್ಪ ಹಾಗೂ ಬಿವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಇದೀಗ ಎಂ ಪಿ ರೇಣುಕಾಚಾರ್ಯ ವಾಗ್ದಾಳಿ ಮುಂದುವರಿಸಿದ್ದು, ಯತ್ನಾಳ ಸುತ್ತಮುತ್ತಲು ಇರುವವರೇ ಅವರನ್ನು ಕೊಬ್ಬಿದ ಕೋಣ ಬಲಿಕೊಡುವ ಹಾಗೆ ಬಲಿಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಇಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಾತ್ರೆಯಲ್ಲಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಮಾತನಾಡಿ, ನಮ್ಮ ಬಗ್ಗೆ ಮಹಾನುಭಾವ ಯತ್ನಾಳ್ ಏನೇನೋ ಮಾತನಾಡುತ್ತಾರೆ. ಕೊಬ್ಬಿದ ಕೋಣ ಬಲಿ ಕೊಡುವಂತೆ ಶಾಸಕ ಯತ್ನಾಳ್ ಅವರನ್ನು ಬಲಿಕೊಡುತ್ತಾರೆ. ಅವರ ಜೊತೆಯಲ್ಲಿ ಇರುವವರೇ ಅವರನ್ನು ಬಲಿಕೊಡುತ್ತಾರೆ. ಎಂದು ವಾಗ್ದಾಳಿ ನಡೆಸಿದರು.
ಶಾಸಕ ಯತ್ನಾಳ್ ಜೊತೆಗೆ ಒಂದು ತಂಡ ಇದೆ.ಅದೇ ತಂಡ ಯತ್ನಾಳ್ ಅವರನ್ನು ಮುಗಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ದೇವರಿಗೆ ಬಲಿ ಕೊಡಲು ಕೋಣವನ್ನು ಬಿಟ್ಟಿರುತ್ತಾರೆ. ಸುಣ್ಣದ ನೀರು ಹಾಗೂ ಉಪ್ಪಿನ ನೀರು ಕುಡಿಸಿ ಕೋಣ ಬಲಿಕೊಡುತ್ತಾರೆ. ಕೊಬ್ಬಿದ ಕೋಣವನ್ನು ಬಲಿ ಕೊಡುವಂತೆ ಯತ್ನಾಳನ್ನು ಬಲಿಕೊಡುತ್ತಾರೆ.ನನ್ನ ಹಂದಿಗೆ ಹೋಲಿಸಿದರು. ಹಂದಿ ಅಂದರೆ ದೇವರ ಅವತಾರ. ಅಂತಾ ದೇವರಿಗೆ ನನ್ನನ್ನು ಹೋಲಿಕೆ ಮಾಡಿದಕ್ಕೆ ಯತ್ನಾಳ್ಗೆ ವಂದಿಸುವೆ ಎಂದರು.