ಧಾರವಾಡ : ಧಾರವಾಡದಲ್ಲಿ ಹಾಡಹಗಲೇ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಮನೆಗೆ ನುಗ್ಗಿದ ಖದೀಮರು ವೃದ್ದೆಗೆ ಥಳಿಸಿ ಚಿನ್ನಾಭರಣ, ನಗದು ಹಣ ಕದ್ದು ಪರಾರಿಯಾಗಿರುವ ಘಟನೆ ಮಾಳಮಡ್ಡಿ ಬಡಾವಣೆಯ ಕಬ್ಬೂರ ರಸ್ತೆಯಲ್ಲಿ ಒಂದು ಘಟನೆ ನಡೆದಿದೆ.
ಮನೆಯಲ್ಲಿದ್ದ ವೃದ್ದೆ ವಿನೋದಿನಿಗೆ ಥಳಿಸಿ ಪರಾರಿಯಾಗಿದ್ದಾರೆ. ಮಾಂಗಲ್ಯ ಸರ, 25,000 ನಗದು ದೋಚಿದ ಕಳ್ಳರು ಮನೆಯ ಸಿಸಿ ಕ್ಯಾಮೆರಾ, ಡಿವಿಆರ್ ಸಹ ದೋಚಿಕೊಂಡು ಪರಾರಿಯಾಗಿದ್ದಾರೆ. ಹಲ್ಲೆಗೆ ಒಳಗಾದ ವೃದ್ದೆ ವಿನೋದಿನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಡಿಸಿಪಿ ಮಹಾಲಿಂಗ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.