ಯಾದಗಿರಿ : ಯಾದಗಿರಿಯಲ್ಲಿ ಭೀಕರವಾದಂತಹ ಅಪಘಾತ ಸಂಭವಿಸಿದ್ದು, ಬೈಕ್ ಸ್ಕಿಡ್ ಆಗಿ ಸವಾರ ರಸ್ತೆ ಮೇಲೆ ಬಿದ್ದಿದ್ದ. ಈ ವೇಳೆ ಬೈಕ್ ಸವಾರನನ್ನು ತಪ್ಪಿಸಲು ಬಸ್ ಚಾಲಕ ನಿಯಂತ್ರಣ ಕಳೆದುಕೊಂಡು ಬಸ್ ಪಲ್ಟಿ ಆಗಿ ಬಿದ್ದ ಪರಿಣಾಮ 15 ಜನರು ಗಾಯಗೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ ನಡೆದಿದೆ.
ಹೌದು ಯಾದಗಿರಿ ಜಿಲ್ಲೆ ವಡಗೇರ ಪಟ್ಟಣದ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕೆಕೆಆರ್ಟಿಸಿ ಬಸ್ ಪಲ್ಟಿಯಾಗಿದೆ. 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆ ಮಧ್ಯೆ ಸ್ಕೀಡ್ ಆಗಿ ಬೈಕ್ ಸವಾರ ಬಿದ್ದಿದ್ದನು. ಬಸ್ ಚಾಲಕ ಬೈಕ್ ಸವಾರರನ್ನು ತಪ್ಪಿಸಲು ಹೋಗಿದ್ದನು. ಈ ವೇಳೆ ಸಾರಿಗೆ ಬಸ್ ರಸ್ತೆ ಕೆಳಗೆ ಇಳಿದು ಪಲ್ಟಿಯಾಗಿದೆ. ವಡಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.