ವಿಜಯಪುರ : ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿ ಮಾಡುತ್ತದೆ ಎಂದು ನಿರ್ಧರಿಸಿದ್ದರು ಕೂಡ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಅಟ್ಟಹಾಸ ಮುಂದುವರೆದಿದೆ, ಇದೀಗ ಮೈಕ್ರೋ ಫೈನಾನ್ಸ್ ಬಂಧಿಗಳ ಕಿರುಕುಳಕ್ಕೆ ಬೇಸತ್ತು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸಲಾದಹಳ್ಳಿಯಲ್ಲಿ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.
ಹೌದು ಮೈಕ್ರೋ ಫೈನಾನ್ಸ್ ಅವರ ಕಿರುಕುಳಕ್ಕೆ ಬೇಸತ್ತು ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. ದೇವರಹಿಪ್ಪರಗಿ ತಾಲೂಕಿನ ಸಲಾದಹಳ್ಳಿ ಗ್ರಾಮದಲ್ಲಿ ಈ ಒಂದು ಆತ್ಮಹತ್ಯೆ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಸಲಾದಹಳ್ಳಿಯಲ್ಲಿ ರೈತ ಬಸನಗೌಡ ಬಿರಾದರ್ (52) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರು L&T ಇಂದ 1.10 ಲಕ್ಷ, ನವಚೇತನ ಫೈನಾನ್ಸ್ ನಿಂದ 1 ಲಕ್ಷ, ESF ಫೈನಾನ್ಸ್ ನಲ್ಲಿ 75 ಸಾವಿರ, ಚೈತನ್ಯ ಫೈನಾನ್ಸ್ ನಲ್ಲಿ 1ಲಕ್ಷ, RBL ಫೈನಾನ್ಸಿನಿಂದ 1ಲಕ್ಷ, ಸುಗಮ ಫೈನಾನ್ಸ್ ನಲ್ಲಿ 50 ಸಾವಿರ ಹಾಗೂ ಧರ್ಮಸ್ಥಳ ಸಂಘದಲ್ಲಿ 1ಲಕ್ಷ ಸಾಲವನ್ನು ಬಸನಗೌಡ ಬಿರಾದರ್ ಪಡೆದಿದ್ದರು. ಘಟನೆ ಕುರಿತಂತೆ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.