ಬೆಂಗಳೂರು : ತೆಲುಗಿನಲ್ಲಿ ನಟ ಅಲ್ಲು ಅರ್ಜುನ್ ನಟಿಸಿರುವ ಪುಷ್ಪ ಸಿನಿಮಾದಲ್ಲಿ ರಕ್ತಚಂದನ ಕಳ್ಳ ಸಾಗಾಟ ಮಾಡಿ, ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುವ ದೃಶ್ಯ ಸಿನಿಮಾದಲ್ಲಿ ಇದೆ. ಇದೀಗ ಅದೇ ರೀತಿ ಆಂಧ್ರದಿಂದ ರಕ್ತ ಚಂದನ ಮರದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದವರನ್ನು ಪೊಲೀಸರು ಬೇಟೆಯಾಡಿದ್ದಾರೆ.
ಹೌದು ಪುಷ್ಪ ಸಿನಿಮಾದ ರೀತಿಯಲ್ಲಿ ಆಂಧ್ರದ ನಲ್ಲಮಲ ಅರಣ್ಯದಿಂದ ಅಕ್ರಮವಾಗಿ ರಕ್ತಚಂದನ ಮರಗಳ ಸಾಗಾಟ ಮಾಡುತ್ತಿದ್ದವರನ್ನು ಬೇಟೆಯಾಡಿದ ಆಂಧ್ರದ ಚಿತ್ತೂರು ಪೊಲೀಸರು, ನೀಲಗಿರಿ ತೋಪಿನಲ್ಲಿ ಅಡಗಿಸಿಟ್ಟಿದ್ದ 150 ರಕ್ತಚಂದನ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ಬಳಿ ರಕ್ತಚಂದನ ತುಂಡು ಜಪ್ತಿ ಮಾಡಲಾಗಿದೆ.