ನವದೆಹಲಿ : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣ ಬಿಗಿಪಟ್ಟು ಹಿಡಿದಿದ್ದು, ಬಿ.ವೈ ವಿಜೇಂದ್ರ ವಿರುದ್ಧ ಯತ್ನಾಳ್ ಬಣದ ಸಮರ ಇದೀಗ ಮುಂದುವರೆದಿದೆ. ಹಾಗಾಗಿ ಫೆಬ್ರವರಿ 10ರಂದು ನವದೆಹಲಿಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
ಹೈಕಮಾಂಡ್ ಬಳಿ ಲಿಂಗಾಯತ ಅಸ್ತ್ರ ಹೂಡಿದ ಯತ್ನಾಳ್, ತಟಸ್ಥ ಬಣದಲ್ಲಿ ಗುರುತಿಸಿಕೊಂಡಿದ್ದ ಸಂಸದ ಬಸವರಾಜ್ ಬೊಮ್ಮಾಯಿಯನ್ನು ಭೇಟಿಯಾಗಿದ್ದಾರೆ. ಬಿವೈ ವಿಜಯೇಂದ್ರ ವಿರುದ್ಧ ಹೋರಾಟಕ್ಕೆ ಕೈಜೋಡಿಸುವಂತೆ ಯತ್ನಾಳ್ ಬಣ ಮನವಿ ಮಾಡಿಕೊಂಡಿದ್ದಾರೆ.
ಹಾಗಾಗಿ ಫೆಬ್ರುವರಿ 10 ರಂದು ನವದೆಹಲಿಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಸರ್ಕಾರಿ ನಿವಾಸದ ಪೂಜೆ ನೆಪದಲ್ಲಿ ಸಭೆಗೆ ಪ್ಲಾನ್ ಮಾಡಿಕೊಂಡಿದ್ದು, ಸಂಸದ ಬೊಮ್ಮಾಯಿ ನೇತೃತ್ವದಲ್ಲಿ ಫೆಬ್ರವರಿ 10ರಂದು ಈ ಒಂದು ಸಭೆ ನಡೆಯಲಿದೆ. ಈ ಮೂಲಕ ಬಿವೈ ವಿಜಯೇಂದ್ರ ವಿರುದ್ಧ ಯತ್ನಾಳ್ ಬಣ ಸಿಡಿದೆದ್ದಿದೆ.