ದಕ್ಷಿಣಕನ್ನಡ : ಭೂತ ಪ್ರೇತದ ಬಗ್ಗೆ ನಾವೆಲ್ಲ ಕಥೆಗಳಲ್ಲಿ ಕೇಳಿರುತ್ತೇವೆ. ಸಿನೆಮಾಗಳಲ್ಲಿ ನೋಡಿರುತ್ತೇವೆ. ಆದರೆ ದಕ್ಷಿಣ ಕನ್ನಡದಲ್ಲಿ ಕುಟುಂಬವೊಂದಕ್ಕೆ ಕಳೆದ 3 ತಿಂಗಳಿನಿಂದ ಪ್ರೇತ ಭಾದೆ ಕಾಡುತ್ತಿದೆ ಅಂತೇ. ಅಲ್ಲದೇ ಮೊಬೈಲ್ ನಲ್ಲಿ ವಿಚಿತ್ರ ಮುಖದ ವ್ಯಕ್ತಿಯ ಫೋಟೋ ಕೂಡ ಸೆರೆಹಿಡಿದಿದ್ದಾರೆ.
ಹೌದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದಲ್ಲಿ ಮೊಬೈಲ್ ಕ್ಯಾಮೆರಾದಲ್ಲಿ ವಿಚಿತ್ರವಾದಂತ ಮುಖ ಸೆರೆಯಾಗಿದೆ. ಮೊಬೈಲ್ ನಲ್ಲಿ ವಿಚಿತ್ರವಾದ ಮುಖ ಗೋಚರವಾಗಿದೆ. ಮಾಲಾಡಿ ಗ್ರಾಮದ ಉಮೇಶ್ ಶೆಟ್ಟಿ ಕುಟುಂಬಕ್ಕೆ ವಿಚಿತ್ರವಾದಂತಹ ಅನುಭವವಾಗುತ್ತಿದ್ದು, ಕಳೆದ ಮೂರು ತಿಂಗಳಿನಿಂದ ಕುಟುಂಬಕ್ಕೆ ಪ್ರೇತ ಭಾದೆ ಕಾಡುತ್ತಿದೆಯಂತೆ.
ಉಮೇಶ್ ಶೆಟ್ಟಿ ಮನೆ ಒಳಗೆ ಬಟ್ಟೆಗೆ ಆಗಾಗ ಬೆಂಕಿ ಬೀಳುತ್ತದಂತೆ. ಮನೆಯಲ್ಲಿರುವ ಪಾತ್ರೆಗಳು ಸೇರಿದಂತೆ ಎಲ್ಲ ವಸ್ತುಗಳು ಏಕಾಏಕಿ ಬೀಳುತ್ತಾವೇಯಂತೆ. ರಾತ್ರಿ ಹೊತ್ತು ನಿದ್ದೆ ಇಲ್ಲದೆ ಇಡೀ ಕುಟುಂಬ ಕಾಲ ಕಳೆಯುತ್ತಿದೆ. ಉಮೇಶ್ ಶೆಟ್ಟಿ ಪುತ್ರಿ ಮೊಬೈಲ್ ನಲ್ಲಿ ಈ ಒಂದು ವಿಲಕ್ಷಣ ಫೋಟೋವನ್ನು ಸೆರೆಹಿಡಿದಿದ್ದಾಳೆ. ಮನೆ ಒಳಗೆ ಯಾರೋ ಅತ್ತಿಂದಿತ್ತ ಓಡಾಡುತ್ತಿರುವ ಅನುಭವವಾಗುತ್ತಿದೆ. ಎಂದು ಉಮೇಶ್ ಶೆಟ್ಟಿ, ಕುಟುಂಬಸ್ಥರು ಆಳಲು ತೋಡಿಕೊಂಡಿದ್ದಾರೆ.