ಬಾಗಲಕೋಟೆ : ಬಾಗಲಕೋಟೆಯಲ್ಲಿ ಅಮಾನವೀಯ ಘಟನೆ ನಡೆದಿದ್ದು ಕ್ಷುಲ್ಲಕ ಕಾರಣಕ್ಕೆ ಬಾಲಕಿಯ ಕೆನ್ನೆಗೆ ಬಿಸಿ ಚಮಚದಿಂದ ಬರೆಯಿಟ್ಟು ಅಂಗನವಾಡಿ ಸಹಾಯಕಿ ಕ್ರೂರತ್ವ ಮೆರೆದಿದ್ದಾಳೆ. ಈ ಹಿನ್ನೆಲೆಯಲ್ಲಿ ಕೂಡಲೇ ಅಂಗನವಾಡಿ ಸಹಾಯಕಿಯನ್ನು ಅಮಾನತು ಮಾಡಲಾಗಿದೆ.ಈ ಒಂದು ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಗುಲಗಾಲಜಂಬಗಿ ಗ್ರಾಮದ ಅಂಗನವಾಡಿಯಲ್ಲಿ ನಡೆದಿದೆ.
ಬಾಲಕಿಯ ಕೆನ್ನೆಗೆ ಸಹಾಯಕಿ ಅನ್ನದ ಚಮಚದಿಂದಬರೆಹಾಕಿದ ಅಮಾನವೀಯ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಗುಲಗಾಲಜಂಬಗಿ ಗ್ರಾಮದ ಅಂಗನವಾಡಿಯಲ್ಲಿ ನಿನ್ನೆ ನಡೆದಿದೆ. ಬರೆಯಿಂದ ಪ್ರೀತಿ ಎಂಬ ಬಾಲಕಿಯ ಕೆನ್ನೆಗೆ ಗಾಯವಾಗಿದೆ. ಅಂಗನವಾಡಿ ಕಾರ್ಯಕರ್ತೆ ಶೋಭಾ, ಸಹಾಯಕಿ ಶಾರವ್ವಅವರನ್ನು ತಕ್ಷಣ ಅಮಾನತುಗೊಳಿಸಿ ಸಿಡಿಪಿಒ ಕಾಶಿಬಾಯಿ ಆದೇಶಿಸಿದ್ದಾರೆ. ಬರೆ ಹಾಕಿದ್ದಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.