ಬೆಂಗಳೂರು : ಬೆಂಗಳೂರಿನಲ್ಲಿ ಐಷಾರಾಮಿ ಕಾರುಗಳ ವೀಲ್ಗಳನ್ನು ಕದ್ದು ಅಂಗಡಿಗಳಿಗೆ ಹಾಗೂ ಆನ್ಲೈನ್ ಮುಖಾಂತರ ಮಾರಾಟ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು ಬೆಂಗಳೂರಲ್ಲಿ ಕಾರ್ ಟೈರ್ ಕದಿಯುತ್ತಿದ್ದ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮನೆಯ ಮುಂದೆ ನಿಲ್ಲಿಸಿದಂತಹ ಕಾರ್ ಟೈರ್ ಗಳನ್ನು ಕದಿಯುತ್ತಿದ್ದ ಹೈದರ್ ಅಲಿ ಹಾಗೂ ಗೌಸ್ ಬೇಗ್ ಎನ್ನುವ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ರಾತ್ರಿಯಲ್ಲಿ ಸ್ಕೂಟಿಯಲ್ಲಿ ಬಂದು ವ್ಹಿಲ್ ಕದ್ದು ಪರಾರಿಯಾಗುತ್ತಿದ್ದರು. ಅಂಗಡಿ ಹಾಗೂ ಆನ್ಲೈನ್ ಮೂಲಕ ವ್ಹಿಲ್ ಗಳನ್ನು ಸೇಲ್ ಮಾಡುತ್ತಿದ್ದರು. ಸದ್ಯ ಆರೋಪಿಗಳಿಂದ 60 ಮ್ಯಾಗ್ ವೀಲ್‌ಗಳನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳ ಬಂಧನದಿಂದ 20 ಪ್ರಕರಣಗಳು ಇದೀಗ ಪತ್ತೆಯಾಗಿವೆ.