ನವದೆಹಲಿ : ಭಾರತದ ಸ್ಟಾರ್ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ ವಿಶ್ವ ಕ್ರಿಕೆಟ್’ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿದ್ದು, ವೈಟ್ ಬಾಲ್ ಸರಣಿಯ ಐದನೇ ಟಿ20ಯಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದರು.
ವಾಂಖೆಡೆ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ 54 ಎಸೆತಗಳಲ್ಲಿ 135 ರನ್ ಗಳಿಸಿದ ಅಭಿಷೇಕ್, ಇತ್ತೀಚಿನ ಐಸಿಸಿ ಪುರುಷರ ಟಿ20ಐ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಸಾಕಷ್ಟು ದೊಡ್ಡ ಜಿಗಿತವನ್ನ ಸಾಧಿಸಿದ್ದಾರೆ. ವಾಂಖೆಡೆಯಲ್ಲಿ ನಡೆದ ಅವರ ಮಿಂಚಿನ ಆಟದಲ್ಲಿ 24 ವರ್ಷದ ಆಟಗಾರ 38 ಸ್ಥಾನ ಜಿಗಿದು ಎರಡನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಟ್ರಾವಿಸ್ ಹೆಡ್ 855 ರೇಟಿಂಗ್ನೊಂದಿಗೆ ನಂ.1 ಸ್ಥಾನದಲ್ಲಿದ್ದಾರೆ. ಅಭಿಷೇಕ್ ಶರ್ಮಾ 829 ರೇಟಿಂಗ್ ಹೊಂದಿದ್ದಾರೆ. ಈ ಹಿಂದೆ ಎರಡನೇ ಸ್ಥಾನದಲ್ಲಿದ್ದ ತಿಲಕ್ ವರ್ಮಾ ಒಂದು ಸ್ಥಾನ ಕೆಳಗಿಳಿದು 803 ರೇಟಿಂಗ್ನೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ, ಫಿಲ್ ಸಾಲ್ಟ್ ಮತ್ತು ಸೂರ್ಯಕುಮಾರ್ ಯಾದವ್ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.
BREAKING : ರಾಜ್ಯದಲ್ಲಿ ‘ಆನ್ಲೈನ್ ಗೇಮ್’ ಗೆ ಮತ್ತೊಂದು ಬಲಿ : ಧಾರವಾಡದಲ್ಲಿ ‘IIT’ ಸ್ಟಾಫ್ ನರ್ಸ್ ನೇಣಿಗೆ ಶರಣು!
BREAKING : ಅಮೃತಸರಕ್ಕೆ ಬಂದಿಳಿದ 104 ಭಾರತೀಯರನ್ನ ಹೊತ್ತ ‘ಅಮೆರಿಕ ಮಿಲಿಟರಿ ವಿಮಾನ’