ಬೆಂಗಳೂರು : ಬೆಂಗಳೂರಿನಲ್ಲಿ ಅಂತರಾಜ್ಯ ಕುಖ್ಯಾತ ಖತರ್ನಾಕ್ ಕಳ್ಳನನ್ನು ಮಡಿವಾಳ ಠಾಣೆಯ ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ಈತ ಎಂತಹ ಖತರ್ನಾಕ್ ಕಳ್ಳ ಎಂದರೆ, ಕಳ್ಳತನವೇ ಈತನ ಪ್ರೊಫೆಷನಲ್ ವೃತ್ತಿಯಾಗಿದ್ದು, ತಾನು 400 ಚದರ ಅಡಿ ಮನೆಯಲ್ಲಿ ಇದ್ದರು ಸಹ, ಇದೇ ಕಳ್ಳತನವನ್ನು ಮಾಡಿ ಬಾಲಿವುಡ್ ನಟಿಗೆ 3 ಕೋಟಿ ರೂಪಾಯಿ ಬಂಗಲೆ ಗಿಫ್ಟ್ ನೀಡಿದ್ದಾನೆ. ಸದ್ಯ ಈತನನ್ನು ಮಡಿವಾಳ ಠಾಣೆ ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆಗೊಳಪಡಿಸಿದ್ದಾರೆ.
ಇದು ಅಂತ ರಾಜ್ಯ ಕಳ್ಳ ಪಂಚಾಕ್ಷರಿಯ ಕಥೆಯಾಗಿದ್ದು ಬಾಲಿವುಡ್ ನ ಖ್ಯಾತ ನಟಿ ಜೊತೆ ಕಳ್ಳನಿಗೆ ನಂಟಿತ್ತು ಎನ್ನಲಾಗಿದೆ. ಕಳ್ಳತನ ಮಾಡಿದ ಹಣದಲ್ಲೇ ಸುಮಾರು 3 ಕೋಟಿಯ ಮನೆಯನ್ನು ಕಟ್ಟಿಸಿ ಕೊಟ್ಟಿದ್ದಾನೆ. ಬಾಲಿವುಡ್ ನಟಿಗೆ ಕಳ್ಳ ಪಂಚಾಕ್ಷರಿ ಮನೆ ಕಟ್ಟಿಸಿ ಕೊಟ್ಟಿದ್ದಾನೆ. ಮದುವೆಯಾಗಿದ್ದರು ಕೂಡ ಬಾಲಿವುಡ್ ನಟಿ ಈತನ ಗರ್ಲ್ ಫ್ರೆಂಡ್ ಆಗಿದ್ದಳು. ತಾನಿರೋದು 400 ಅಡಿಯ ಅಡಿಯಲ್ಲಿ ಸಣ್ಣ ಮನೆಯಲ್ಲಿ ಆದರೆ ಆಕೆಗೆ ಮಾತ್ರ ಬಂಗಲೆ ಕಟ್ಟಿಸಿ ಕೊಟ್ಟಿದ್ದಾನೆ.
2003ರಿಂದ ಆದ ಕಳ್ಳತನ ಆರಂಭಿಸಿದ್ದಾನೆ. 2009 ರಿಂದ ಆದ ಪ್ರೊಫೆಷನಲ್ ಕಳ್ಳನಾಗಿ ಬದಲಾಗಿದ್ದ ಕಳ್ಳ ಪಂಚಾಕ್ಷರಿ ಸ್ವಾಮಿ ತಂದೆ ರೈಲ್ವೆ ಪೊಲೀಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.ಕಳ್ಳತನ ಮಾಡಿ ಕೋಟಿ ಹಣ ಸಂಪಾದನೆ ಮಾಡಿದ್ದಾನೆ ಬಳಿಕ 2016ರಲ್ಲಿ ಗುಜರಾತ್ ಪೊಲೀಸರು ಇತರನ್ನು ಅರೆಸ್ಟ್ ಮಾಡಿದರು. 6 ವರ್ಷ ಗುಜರಾತ್ ಸಬರಮತಿ ಜೈಲಿನಲ್ಲಿ ಪಂಚಾಕ್ಷರಿ ಆರೋಪಿ ಇದ್ದ ಹೊರಬಂದು ಮತ್ತೆ ಕಳ್ಳತನ. ಮತ್ತೆ ಮಹಾರಾಷ್ಟ್ರದಲ್ಲಿ ಬಂಧನಕ್ಕೆ ಒಳಗಾಗುತ್ತಾನೆ ಗೆಲ್ಲಿನಿಂದ ಬಂದು 2024ರಲ್ಲಿ ಮತ್ತೆ ಬೆಂಗಳೂರಿನಲ್ಲಿ ಕಳ್ಳತನ ಮುಂದುವರಿಸುತ್ತಾನೆ.