ಮೈಸೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಇದೀಗ ಜಾರಿ ನಿರ್ದೇಶನಾಲಯ ಕಚೇರಿಯ ಅಧಿಕಾರಿಗಳು 50:50 ಅನುಪಾತ ಮಾದರಿಯ ಸೈಟ್ ಹಂಚಿಕೆಯ ಮೂಲವನ್ನು ಕೆದಕಿದ್ದು, ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಸಿಎಂ ಆಗಿದ್ದಾಗಿನಿದಾಗಲು ಈ ಒಂದು 50:50 ಅನುಪಾತದಲ್ಲಿ ಸೈಟ್ ಹಂಚಿಕೆಯಾಗಿದೆ ಎಂದು ಮುಡಾ ತನಿಖೆಯ ವೇಳೆ ಬಹಿರಂಗವಾಗಿದೆ.
ಹೌದು 2016 ರಿಂದಲೂ ಈ 50-50 ಸೈಟ್ ಹಂಚಿಕೆಯಾಗಿದೆ. ಸಿದ್ದರಾಮಯ್ಯ ಮೊದಲು ಅವಧಿಯಲ್ಲಿ 50:50 ಸೈಟ್ ಹಂಚಿಕೆಯಾಗಿದೆ. 2022ರ ಅವಧಿಯಲ್ಲಿ ದಿನೇಶ್ ಅವರಿಂದ 812 ಸೈಟ್ ಹಂಚಿಕೆಯಾಗಿದೆ. 550 ದಿನದಲ್ಲಿ ಬರೋಬ್ಬರಿ 812ಸೆಂಟ್ ಹಂಚಿದ ಮಾಜಿ ಆಯುಕ್ತ ದಿನೇಶ್. ದಿನೇಶ್ ಅವಧಿಯ 50:50 ಸೈಟ್ ಸೀಜ್ ಗೆ ಇಡಿ ಸಿದ್ಧತೆ ಮಾಡಿಕೊಂಡಿದ್ದು ಪ್ರತಿನಿತ್ಯವೂ ಮೂಡಾದಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ. 2016 ರಲ್ಲಿ ಆಯುಕ್ತರಾಗಿದ್ದ ಮಹೇಶದಿಂದ 8ಸೈಟ್, 2018ರಲ್ಲಿ ಕಾಂತರಾಜುರಿಂದ 10 ಸೈಟ್ ಹಾಗೂ 2020ರ ಅವಧಿಯಲ್ಲಿ ನಟೇಶ್ ರಿಂದ 58 ಸೈಟ್ ಹಂಚಿಕೆಯಾಗಿದೆ.