ಚಿಕ್ಕಬಳ್ಳಾಪುರ : ಪತ್ನಿಗೆ ಅಕ್ರಮ ಸಂಬಂಧವೇ ಇದೆ ಎಂದು ಪತಿಯೊಬ್ಬ ಪತ್ನಿಗೆ ನಿರಂತರ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತು ಪತ್ನಿಯ ಸಹೋದರ ಮಾರಕಾಸ್ತ್ರಗಳಿಂದ ಐದಾರು ಜನರು ಸೇರಿ ಸ್ವಂತ ಅಕ್ಕನ ಗಂಡನನ್ನೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಮೋಟಲೂರು ಎಂಬಲ್ಲಿ ನಡೆದಿದೆ.
ಹೌದು ಚಿಕ್ಕಬಳ್ಳಾಪುರ ತಾಲೂಕಿನ ಮೋಟಲೂರು ಕ್ರಾಸ್ ಬಳಿ ಕೊಲೆಯಾಗಿದೆ. ಘೋಷನಹಳ್ಳಿ ನಿವಾಸಿ ಸುಭಾಷ್ (35) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ಸುಭಾಷ್ ವಿರುದ್ಧ ಅನೈತಿಕ ಸಂಬಂಧ ಇಟ್ಟುಕೊಂಡು ಪತ್ನಿಗೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿತ್ತು. ಐದು ಜನ ಸ್ನೇಹಿತರ ಜೊತೆ ಗೋಡೆ ಬಾಮೈದ ಅಟ್ಟಾಡಿಸಿ ಕೊಲೆ ಮಾಡಿದ್ದಾನೆ. ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ. ಘಟನೆ ಕುರಿತು ಪ್ರಕರಣದ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.