ಮಂಡ್ಯ : ನಿನ್ನೆ ಮಂಡ್ಯ ಜಿಲ್ಲೆಯ ತಿಬ್ಬನಹಳ್ಳಿ ಬಳಿ ವಿಸಿ ನಾಲೆಗೆ ಕಾರು ಬಿದ್ದು ಘೋರ ದುರಂತ ಸಂಭವಿಸಿದ್ದು, ವಿಸಿ ನಾಲಿಗೆ ಬಿದ್ದಿದ್ದ ಇಂಡಿಕಾ ಕಾರಿನಲ್ಲಿ ಇಬ್ಬರ ಮೃತ ದೇಹಗಳು ಪತ್ತೆಯಾಗಿವೆ. ಸುಮಾರು 15 ಅಡಿ ಆಳದಲ್ಲಿ ಸಿಲುಕಿದ್ದ ಕಾರಣ ಇದೀಗ ಕ್ರೇನ್ ಮೂಲಕ ಕಾರನ್ನು ಮೇಲೆ ಎತ್ತಲಾಗಿದೆ.ಇಂದು ಇನ್ನೊಬ್ಬನ ಮೃತದೇಹ ಪತ್ತೆಯಾಗಿದ್ದು, ಮೃತರ ಸಂಖ್ಯೆ ಮೂರಕ್ಕೇರಿದೆ.
ಹೌದು ಮಂಡ್ಯ ತಾಲೂಕಿನ ಮಾಚನಹಳ್ಳಿ ಸಮೀಪ ತಿಬ್ಬನಹಳ್ಳಿ ಬಳಿ ವಿಸಿ ನಾಳೆಯಲ್ಲಿ ಪೀರ್ ಖಾನ್ ಶವ ಪತ್ತೆಯಾಗಿದೆ. ಮಂಡ್ಯದ ಹಾಲಹಳ್ಳಿ ನಿವಾಸಿಯಾಗಿರುವ ಪೀರ್ ಖಾನ್ ನಿನ್ನೆ ಫಯಾಜ್ ಸಂಪಾದನೆ ಪತಿಯಾಗಿತ್ತು ಮಂಡ್ಯ ತಾಲೂಕಿನ ಮಾಚನಹಳ್ಳಿ ಬಳಿ ಈ ಒಂದು ಕಾರು ನಾಲಿಗೆ ಬಿದ್ದು ಪಲ್ಟಿಯಾಗಿ ಬಿದ್ದಿತ್ತು.
ಘಟನೆಯಲ್ಲಿ ಕಾರಿನ ಮಾಲೀಕ ಫಯಾಜ್ (40) ಸಾವನ್ನಪ್ಪಿದ್ದಾರೆ. ನಯಾಜ್ ಎಂಬುವರನ್ನು ರಕ್ಷಿಸಲಾಗಿದ್ದು, ಅಸ್ಲಂಪಾಷಾ ಮತ್ತು ಪೀರ್ಖಾನ್ ಸೇರಿದಂತೆ ಇಬ್ಬರು ನಾಪತ್ತೆಯಾಗಿದ್ದರು. ನಿನ್ನೆ ಅಸ್ಲಂ ಪಾಷಾ ಮೃತದೇಹ ಹೊರತೆಗೆಯಲಾಗಿತ್ತು. ಇದೀಗ ಇಂದು ಪೀರ್ ಖಾನ್ ಮೃತದೇಹವನ್ನು ಹೊರ ತೆಗೆಯಲಾಗಿದೆ.