ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಇದೀಗ ಮತ್ತೆ ಗುಂಡಿನ ಸದ್ದು ಕೇಳಿಸಿದ್ದು, ಉತ್ತರ ಭಾರತದಿಂದ ಬಂದಂತಹ ಕಳ್ಳರ ಗ್ಯಾಂಗ್ ಮೇಲೆ ಹುಬ್ಬಳ್ಳಿಯ ಬೆಂಡಿಗಿರಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಈ ವೇಳೆ ಇಬ್ಬರು ಕಳ್ಳರ ಕಾಲಿಗೆ ಗುಂಡೇಟು ತಗುಲಿರುವ ಘಟನೆ ವರದಿಯಾಗಿದೆ.
ಹೌದು ಹುಬ್ಬಳ್ಳಿಯಲ್ಲಿ ನಟೋರಿಯಸ್ ಕಳ್ಳರ ಕಾಲಿಗೆ ಗುಂಡೇಟು ಬಿದ್ದಿದ್ದು, ಹುಬ್ಬಳ್ಳಿಯ ಬಿಡ್ನಾಳ್ ಬಳಿ ಬೆಂಡಿಗೇರಿ ಪೊಲೀಸ್ರಿಂದ ಫೈರಿಂಗ್ ನಡೆಸಲಾಗಿದೆ. ಗುಜರಾತ್ ಮೂಲದ ನಿಲೇಶ್ ಮತ್ತು ದೀಪಕ್ ಕಾಲಿಗೆ ಗುಂಡೇಟು ತಗುಲಿದೆ. ಗುಜರಾತ್ ಮೂಲದಿಂದ ಐವರ ಗುಂಪು ಕಟ್ಟಿಕೊಂಡು ಈ ಗ್ಯಾಂಗ್ ಹುಬ್ಬಳ್ಳಿಗೆ ಬಂದಿತ್ತು.
ಒಂದು ತಿಂಗಳಲ್ಲಿ 5 ಕಳ್ಳತನ ಕೇಸ್ ನಲ್ಲಿ ಈ ಒಂದು ಕಳ್ಳರ ತಂಡ ಭಾಗಿಯಾಗಿತ್ತು. ಮನೆ ಕಳ್ಳತನ ಬೈಕ್ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು. ನಿನ್ನೆ ರಾತ್ರಿ ನಮಗೆ ಮಾಹಿತಿ ಬಂದ ತಕ್ಷಣ ನಾವು ಘಟನಾ ಸ್ಥಳಕ್ಕೆ ಹೋಗಿದ್ದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ನಾವು ಫೈರಿಂಗ್ ಮಾಡಿದಾಗ ನೀಲೇಶ್ ಮತ್ತು ದೀಪಕ್ ಮೇಲೆ ಫೈರಿಂಗ್ ಮಾಡಿದ್ದೇವೆ ಎಂದು ಡಿಸಿಪಿ ಮಹಾಲಿಂಗ ನಂದಗಾವಿ ತಿಳಿಸಿದರು.