ಧಾರವಾಡ : ಧಾರವಾಡ ಜಿಲ್ಲೆಯ ಧಾರವಾಡ, ಅಳ್ಳಾವರ, ಹುಬ್ಬಳ್ಳಿ, ಕುಂದಗೋಳ ಅಣ್ಣಿಗೇರಿ ಮತ್ತು ನವಲಗುಂದ ಘಟಕಗಳಲ್ಲಿ ಖಾಲಿ ಇರುವ ಗೃಹರಕ್ಷಕರ ಸ್ವಯಂ ಸೇವಕ ಸದಸ್ಯರ ಹುದ್ದೆಗಳ ನೊಂದಣಿಗಾಗಿ ಅರ್ಹ ಪುರುಷ, ಮಹಿಳಾ ಸ್ಥಳೀಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಖುದ್ದಾಗಿ ಅರ್ಜಿಯನ್ನು ಧಾರವಾಡ ಡಿ.ಎ.ಆರ್. ಪೊಲೀಸ್ ಹೆಡ್ ಕ್ವಾರ್ಟಸ್ಟ್ ಆವರಣದಲ್ಲಿರುವ ಗೃಹರಕ್ಷಕದಳ ಕಛೇರಿಯ ಜಿಲ್ಲಾ ಸಮಾದೇಷ್ಟರಿಂದ ಉಚಿತವಾಗಿ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಮಾರ್ಚ 5, 2025 ರೊಳಗಾಗಿ ಸಲ್ಲಿಸಬಹುದು. ಅರ್ಜಿಯನ್ನು ಫೆಬ್ರವರಿ 05, 2025 ರಿಂದ ವಿತರಿಸಲಾಗುವುದು.
296 ಗೃಹರಕ್ಷಕರ ಸ್ವಯಂ ಸೇವಕ ಹುದ್ದೆಗಳ ವಿವರ: ಧಾರವಾಡ ಪುರಷ-95, ಮಹಿಳಾ- 14, ಅಳ್ಳಾವರ ಪುರಷ-95, ಹುಬ್ಬಳ್ಳಿ ಪುರಷ-97, ಮಹಿಳಾ- 1, ಕುಂದಗೋಳ ಪುರಷ-24, ನವಲಗುಂದ ಪುರಷ-8, ಅಣ್ಣಿಗೇರಿ ಪುರಷ-14, ಕಲಘಟಗಿ ಪುರಷ-02, ಒಟ್ಟು ಪುರಷ-254, ಮಹಿಳಾ-15.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 0836-2442496 ಹಾಗೂ ಸಹಾಯಕ ಆಡಳಿತಾಧಿಕಾರಿಗಳು, ಪೊಲೀಸ್ ಅಧೀಕ್ಷಕರ ಕಛೇರಿಯ ದೂರವಾಣಿ ಸಂಖ್ಯೆ: 0836-2233205 ಅಥವಾ ಹೋಂಗಾಡ್ರ್ಸ್ ಕಛೇರಿ, ಪೋಲೀಸ್ ಹೆಡ್ ಕ್ವಾಟ್ರಾಸ್ ಆವರಣ, ಸಮಾದೇಷ್ಟರು (ಕಮಾಂಡೆಂಟ್) ಕಚೇರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಆರೋಗ್ಯ ವಿಮೆ ಕೊಡದ ಆದಿತ್ಯಾ ಬಿರ್ಲಾ ವಿಮಾ ಕಂಪನಿಗೆ ದಂಡ ವಿಧಿಸಿ, ಪರಿಹಾರ ನೀಡಲು ಆಯೋಗ ಆದೇಶ