ಮಂಡ್ಯ : ಇಂದು ಮಂಡ್ಯ ಜಿಲ್ಲೆಯ ತಿಬ್ಬನಹಳ್ಳಿ ಬಳಿ ವಿಸಿ ನಾಲೆಗೆ ಕಾರು ಬಿದ್ದು ಘೋರ ದುರಂತ ಸಂಭವಿಸಿದ್ದು, ಇದೀಗ ವಿಸಿ ನಾಲಿಗೆ ಬಿದ್ದಿದ್ದ ಇಂಡಿಕಾ ಕಾರಿನಲ್ಲಿ ಇನ್ನಿಬ್ಬರ ಮೃತ ದೇಹಗಳು ಪತ್ತೆಯಾಗಿವೆ. ಸುಮಾರು 15 ಅಡಿ ಆಳದಲ್ಲಿ ಸಿಲುಕಿದ್ದ ಕಾರಣ ಇದೀಗ ಕ್ರೇನ್ ಮೂಲಕ ಕಾರನ್ನು ಮೇಲೆ ಎತ್ತಲಾಗಿದೆ.
ಹೌದು ವಿ.ಸಿ ನಾಲಿಯಲ್ಲಿ ಬಿದ್ದಿದ್ದ ಕಾರಿನಲ್ಲಿ ಇಬ್ಬರು ಶವಗಳು ಪತ್ತೆಯಾಗಿವೆ. ಕ್ರೇನ್ ಮೂಲಕ ಪೊಲೀಸರು ಅಗ್ನಿಶಾಮಕ ದಳ ಸಿಬ್ಬಂದಿಗಳು ಕಾರನ್ನು ಮೇಲೆ ಎತ್ತಿದ್ದಾರೆ. ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಬಳಿ ಬಿಸಿ ನಾಲಿಗೆ ಕಾರು ಬಿದ್ದಿತ್ತು ವಿಸಿನಾಲಿಗೆ ಬಿದ್ದಿದ್ದ ಕಾರಿನಲ್ಲಿ ಸದ್ಯ ಇಬ್ಬರ ಮೃತ ದೇಹಗಳು ಪತ್ತೆಯಾಗಿವೆ.
ಘಟನೆಯಲ್ಲಿ ಕಾರಿನ ಮಾಲೀಕ ಫಯಾಜ್ (40) ಸಾವನ್ನಪ್ಪಿದ್ದಾರೆ. ನಯಾಜ್ ಎಂಬುವರನ್ನು ರಕ್ಷಿಸಲಾಗಿದ್ದು, ಅಸ್ಲಂಪಾಷಾ ಮತ್ತು ಪೀರ್ಖಾನ್ ಸೇರಿದಂತೆ ಇಬ್ಬರು ನಾಪತ್ತೆಯಾಗಿದ್ದರು. ವಿಗ ಇವರು ಇಬ್ಬರ ಮೃತ ದೇಹಗಳನ್ನು ಕಾರಿನಿಂದ ಹೊರ ತೆಗೆಯಲಾಗಿದೆ.