ಬೆಂಗಳೂರು : ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ ಮುಂದುವರೆದಿದ್ದು, ಫ್ರೀಯಾಗಿ ಸಿಗರೇಟ್ ಕೊಡದಿದ್ದಕ್ಕೆ ಬೇಕರಿಯಲ್ಲಿ ಕೆಲಸ ಮಾಡುವ ಯುವಕನಿಗೆ ನಿಂದಿಸಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾದನಾಯಕನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ರಾತ್ರಿ 9.30 ರ ಸುಮಾರಿಗೆ ಚಿಕ್ಕಬಿದಿರಕಲ್ಲು ಮುಖ್ಯ ರಸ್ತೆಯಲ್ಲಿರುವ ಬೇಕರಿ ಸಿಬ್ಬಂದಿಗೆ ಕುಡಿದು ಬಂದು ಆನಂದ್ ಎಂಬುವನು ಆವಾಜ್ ಹಾಕಿದ್ದಾನೆ ಎನ್ನಲಾಗಿದೆ.
ಫ್ರೀಯಾಗಿ ಸಿಗರೇಟ್ ಕೊಡದಿದ್ದಕ್ಕೆ ಬೇಕರಿ ಮುಂದೆ ನಿಂತು ಆನಂದ್ ಧಮ್ಕಿ ಹಾಕಿದ್ದು, ಬೇಕರಿಯಲ್ಲಿರುವ ವಸ್ತುಗಳನ್ನು ಎಸೆದು ಅಂಗಡಿ ಮುಚ್ಚಿಸುತ್ತೇನೆ ಎಂದು ಆವಾಜ್ ಹಾಕಿದ್ದಾನೆ. ಸದ್ಯ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.