ಉಡುಪಿ: ಉಡುಪಿ ಜಿಲ್ಲಾಧಿಕಾರಿಯ ಮುಂದೆ ನಕ್ಸಲ್ ಲಕ್ಷ್ಮೀ ತೊಂಬಟ್ಟು ಅವರು ಶರಣಾಗತಿಯಾದರು. ಅವರಿಗೆ ಎ ಕೆಟಗರಿಯಡಿ ಸೂಕ್ತ ಪರಿಹಾರ ನೀಡಲಾಗುವುದು ಅಂತ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಮುಂದೆ ನಕ್ಸಲ್ ಲಕ್ಷ್ಮೀ ತೊಂಬಟ್ಟು ಅವರು ಶರಣಾಗತಿಯಾದರು. ಆ ಬಳಿಕ ತಾನು ಯಾರ ಒತ್ತಡವಿಲ್ಲದೇ ಶರಣಾಗಿದ್ದೇನೆ. ಸಿಎಂ ಕೊಟ್ಟ ಅವಕಾಶ ನೋಡಿ ಮುಖ್ಯವಾಹನಿಗೆ ಬಂದಿರುವುದಾಗಿ ತಿಳಿಸಿದರು.
ನನ್ನ ಊರಿಗೆ ಏನೂ ಇಲ್ಲ. ಶಾಲೆ, ಆಸ್ಪತ್ರೆ, ನೀರು ಬೇಕಿದೆ. ಅವುಗಳ ವ್ಯವಸ್ಥೆ ಮಾಡುವ ಭರವಸೆಯನ್ನು ಸರ್ಕಾರ ನೀಡಿದೆ. ಹೀಗಾಗಿ ತಾನು ಮುಖ್ಯವಾಹಿನಿಗೆ ಬರೋದಕ್ಕೆ ಇಂದು ಶರಣಾಗಿರುವುದಾಗಿ ಹೇಳಿದರು.
ಈ ಬಳಿಕ ಮಾತನಾಡಿದಂತ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅವರು ನಕ್ಸಲ್ ಲಕ್ಷ್ಮೀ ತೊಂಬಟ್ಟು ಅವರು ಶರಣಾಗತಿಯಾಗಿದ್ದಾರೆ. ಅವರಿಗೆ ಎ ಕೆಟಗರಿಯಡಿಯಲ್ಲಿ ಪರಿಹಾರವನ್ನು ಜಿಲ್ಲಾಡಳಿತ ನೀಡಲಿದೆ. ಅವರ ತಿಳಿಸಿರುವಂತ ಸಮಸ್ಯೆ ಪರಿಹಾರದತ್ತವೂ ಗಮನ ಹರಿಸಿವುದಾಗಿ ತಿಳಿಸಿದರು.
BREAKING: ಬಾಬಾ ರಾಮದೇವ್ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ | Baba Ramdev