ಬೆಂಗಳೂರು: ಬಿಎಂಟಿಸಿ ಬಸ್ಸಿನಲ್ಲಿ ಕಂಡಕ್ಟರ್ ಶಾಲಾ ವಿದ್ಯಾರ್ಥಿಯನ್ನು ಕಾಲಿನಿಂದ ಒದ್ದಿದ್ದಾರೆ ಎಂದು ಹೇಳಲಾಗುತ್ತಿರುವಂತ ವೀಡಿಯೋ ಬೆಂಗಳೂರಿನಲ್ಲಿ ನಡೆದಿರುವಂತ ಘಟನೆಯಲ್ಲ. ಬೆಂಗಳೂರಿನ ಬಿಎಂಟಿಸಿ ಬಸ್ಸಿನಲ್ಲಿ ಇಲ್ಲಿಯವರೆಗೆ ಯಾವುದೇ ಆ ಥರದ ಘಟನೆ ನಡೆದಿರುವುದಿಲ್ಲ ಅಂತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಬಿಎಂಟಿಸಿ ಬಸ್ ಸಂಖ್ಯೆ KA57F3364ರ ಬಸ್ಸಿನಲ್ಲಿ ಶಾಲಾ ಹುಡುಗನೊಬ್ಬನಿಗೆ ಕಂಡೆಕ್ಟರ್ ಕಾಲಿನಿಂದ ಒದ್ದಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ಬಿಎಂಟಿಸಿ ಬಸ್ಸುಗಳಲ್ಲಿ ಪ್ರತಿನಿತ್ಯ 40 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಇದರಲ್ಲಿ 1.60 ಲಕ್ಷ ವಿದ್ಯಾರ್ಥಿಗಳಿರುತ್ತಾರೆ. ದಿನಂಪ್ರತಿ 6500 ಬಸ್ಸುಗಳು, 5830 ಅನುಸೂಚಿಗಳಿಂದ 60000 ಟ್ರಿಪ್ ಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ ಎಂದಿದ್ದಾರೆ.
ಇಲ್ಲಿಯವರೆಗೆ ಶಾಲಾ ವಿದ್ಯಾರ್ಥಿಗಳ ಜೊತೆಗೆ ಕಂಡಕ್ಟರ್ ಅನುಚಿತ ವರ್ತನೆ, ಹೊಡೆದ ಘಟಕಗಳು ಘಟನೆ ನಡೆದಿರುವುದಿಲ್ಲ. ಆದ್ದರಿಂದ ಈ ವಿಡಿಯೋ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ, ಬಿಎಂಟಿಸಿ ಬಸ್ಸಿನ ನಿರ್ವಾಹಕರು ವಿದ್ಯಾರ್ಥಿಯೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ತಿಳಿಸಿದ್ದೇನೆ. ದೌರ್ಜನ್ಯನಿಂದ ವರ್ತಿಸಿರುವುದು ದೃಢಪಟ್ಟಲ್ಲಿ ಕೂಡಲೇ ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂಬುದಾಗಿ ಹೇಳಿದ್ದಾರೆ.
BREAKING: ನಾಳೆ ಉಡುಪಿ ಜಿಲ್ಲಾಡಳಿತದ ಮುಂದೆ ನಕ್ಸಲ್ ಲಕ್ಷ್ಮೀ ತೊಂಬಟ್ಟು ಶರಣಾಗತಿ
ಕೇಂದ್ರ ಬಜೆಟ್ 2025: ಹೊಸ ಆದಾಯ ತೆರಿಗೆ ಸ್ಲ್ಯಾಬ್ ಬಿಡುಗಡೆ, ಇಲ್ಲಿದೆ ಸಂಪೂರ್ಣ ಮಾಹಿತಿ | New Income Tax Slab
‘BMTC ನೌಕರ’ರಿಗೆ ಗುಡ್ ನ್ಯೂಸ್: 1.50 ಕೋಟಿ ‘ಅಪಘಾತ ವಿಮಾ ಪರಿಹಾರ’ಕ್ಕೆ ಸರ್ಕಾರ ಒಡಂಬಡಿಕೆ