ಬೆಳಗಾವಿ: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ಜಿಲ್ಲೆಯ ನಾಲ್ವರ ಅಂತ್ಯಕ್ರಿಯೆ ವಿವಿಧೆಡೆ ನೆರವೇರಿತು.ವಡಗಾವಿಯ ನಿವಾಸಿ ಜ್ಯೋತಿ ಹತ್ತರವಾಟ ಮತ್ತು ಅವರ ಪುತ್ರಿ ಮೇಘಾ ಅವರ ಅಂತ್ಯಕ್ರಿಯೆ ಬ್ರಾಹ್ಮಣ ಸಂಪ್ರದಾಯದ ವಿಧಿ ವಿಧಾನದಂತೆ ಶುಕ್ರವಾರ ನೆರವೇರಿತು.ಈ ವೇಳೆ ಅವರ ಸಾಕು ನಾಯಿ ಅಂತಿಮಯಾತ್ರೆ ಯಲ್ಲಿ ಹೆಜ್ಜೆ ಹಾಕಿದ್ದು ನೆರೆದವರ ಕರಳು ಕಿವುಚಿದಂತಾಯಿತು.
ಇಬ್ಬರ ಶವಗಳನ್ನು ದೆಹಲಿಯಿಂದ ಗೋವಾಗೆ ಏರ್‌ಲಿಫ್ಟ್ ಮಾಡಿ, ಅಲ್ಲಿಂದ ಆಂಬುಲೆನ್ಸ್‌ನಲ್ಲಿ ಬೆಳಗಾವಿಗೆ ತಂದಾಗ ಗುರುವಾರ ಮಧ್ಯರಾತ್ರಿ 12.30 ಆಗಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಶುಕ್ರವಾರ ನಸುಕಿನ 4ಕ್ಕೆ ಶವಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಬೆಳಿಗ್ಗೆ 10.30ರ ಸುಮಾರಿಗೆ ಅಂತ್ಯಕ್ರಿಯೆ ಮುಗಿಯಿತು.
ಇನ್ನು ಅದಕ್ಕೂ ಮುನ್ನ ಆಗಮಿಸಿದ್ದ ಅರುಣ ಕೋಪರ್ಡೆ ಅವರ ಅಂತ್ಯಕ್ರಿಯೆ ಗುರುವಾರ ರಾತ್ರಿ 11ಕ್ಕೆ ಇಲ್ಲಿನ ಸದಾಶಿವ ನಗರದ ಸ್ಮಶಾನದಲ್ಲಿ ನೆರವೇರಿದರೆ, ಮಹಾದೇವಿ ಬಾವನೂರ ಅವರ ಅಂತ್ಯಕ್ರಿಯೆ ಅವರ ತವರೂರಾದ ಹುಬ್ಬಳ್ಳಿ ತಾಲ್ಲೂಕಿನ ನೂಲಿ ಗ್ರಾಮದಲ್ಲಿ ನಡೆಯಿತು.
ಶವದೊಂದಿಗೆ ಹೆಜ್ಜೆ ಹಾಕಿದ ನಾಯಿ
ಪ್ರಯಾಗ್‌ರಾಜ್‌ನಲ್ಲಿ ಮೃತಪಟ್ಟ ಬೆಳಗಾವಿಯ ಜ್ಯೋತಿ ಹಾಗೂ ಮೇಘಾ ಅವರ ಶವಗಳನ್ನು ಮನೆ ಮುಂದೆ ತಂದಾಗ ಸಾಕುನಾಯಿ ಶವಗಳ ಮಧ್ಯದಲ್ಲೇ ಕುಳಿತುಕೊಂಡಿತು.ವಗಳ ಮಧ್ಯೆ ಕೂತ ಸಾಕುನಾಯಿ ಮೇಘಾ ಅವರು ಪ್ರೀತಿಯಿಂದ ಸಾಕಿದ್ದ ನಾಯಿ ಕೂಡ ಅಂತಿಮಯಾತ್ರೆಯಲ್ಲಿ ಹೆಜ್ಜೆಹಾಕಿತು.