ಮಂಗಳೂರು: ಕಳೆದ ಒಂದು ವಾರದ ಹಿಂದೆ ಮಂಗಳೂರಿನ ಮಸಾಜ್ ಪಾರ್ಲರ್ ಮೇಲೆ ಪೊಲೀಸರು ದಾಳಿ ನಡೆಸಿ, ರಾಮಸೇನೆ ಮುಖಂಡ ಪ್ರಸಾದ್ ಅತ್ತಾವರ ಎಂಬುವರನ್ನು ಬಂಧಿಸಿದ್ದರು. ಆತನ ಮೊಬೈಲ್ ಕೂಡ ಸೀಜ್ ಮಾಡಿದ್ದರು. ಇಂತಹ ಮೊಬೈಲ್ ನಲ್ಲಿ ಹೋರಾಟಗಾರರಿಗೆ ಶಕ್ತಿ ತುಂಬೋ ಸಲುವಾಗಿ ಸ್ನೇಹಮಯಿ ಕೃಷ್ಣ, ಗಂಗರಾಜುಗಾಗಿ ಪ್ರಾಣಿ ಬಲಿ ನಡೆಸಿ, ರಕ್ತಾಭಿಷೇಕ ಮಾಡಿರುವಂತ ಶಾಕಿಂಗ್ ವೀಡಿಯೋ ಪತ್ತೆಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವಂತ ಮಂಗಳೂರು ಕಮೀಷನರ್ ಮಸಾಜ್ ಪಾರ್ಲರ್ ಕೇಸಲ್ಲಿ ಬಂಧಿತ ಆರೋಪಿಯಾಗಿದ್ದಂತ ಪ್ರಸಾದ್ ಅತ್ತಾವರ ಅವರ ಮೊಬೈಲ್ ಅನ್ನು ಪರಿಶೀಲಿಸಲಾಗಿ ಅದರಲ್ಲಿ ಸ್ಪೋಟಕ ವೀಡಿಯೋಗಳು ಪತ್ತೆಯಾಗಿವೆ. ದೇವರ ಮುಂದೆ ಪ್ರಾಣಿಬಲಿ ಕೊಟ್ಟು ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ, ಗಂಗರಾಜು ಪೋಟೋ ಇರಿಸಿ ರಕ್ತಾಭಿಷೇಕ ಮಾಡಿರೋ ವೀಡಿಯೋ ಕೂಡ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.
ಅಂದಹಾಗೇ ಐದು ಕುರಿಗಳನ್ನು ಸ್ನೇಹಮಯಿ ಕೃಷ್ಣ ಹಾಗೂ ಗಂಗರಾಜು ಪೋಟೋ ಇರಿಸಿ ಬಲಿಕೊಡಲಾಗಿದೆ. ಆ ಬಳಿಕ ಆ ಪೋಟೋಗಳಿಗೆ ರಕ್ತಾಭಿಷೇಕವನ್ನು ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಪ್ರಸಾದ್ ಅತ್ತಾವರ ಹಾಗೂ ಅನಂತ್ ಭಟ್ ಎಂಬುವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.
ಹಿರಿಯ ನಾಗರೀಕರ ಗಮನಕ್ಕೆ: ಫೆ.2ರಂದು ಪೊಲೀಸ್ ಇಲಾಖೆಯಿಂದ ಡಿಜಿಟಲ್ ಸಾಕ್ಷರತೆ, ಸುರಕ್ಷತೆ ಉಚಿತ ತರಬೇತಿ
BREAKING : ನಟ ದರ್ಶನ್ ಗೆ ರಿಲೀಫ್ : ಫೆ.10 ರವರೆಗೆ ಮೈಸೂರಿನಲ್ಲಿರಲು ಅನುಮತಿ ನೀಡಿ ಕೋರ್ಟ್ ಆದೇಶ.!