ಬೆಳಗಾವಿ: ಇಂದು ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ಉಂಟಾಗಿ ಹಲವರು ಸಾವನ್ನಪ್ಪಿದ್ದರು. ಈ ದುರಂತದಲ್ಲಿ ಬೆಳಗಾವಿಯ ತಾಯಿ ಮತ್ತು ಮಗಳು ದುರ್ಮರಣಹೊಂದಿರೋದಾಗಿ ತಿಳಿದು ಬಂದಿದೆ.
ಮಹಾ ಕುಂಭಮೇಳದಲ್ಲಿ ಮೃತರಾದಂತವರನ್ನು ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ್(50) ಹಾಗೂ ಮೇಘಾ ಹತ್ತರವಾಠ್ ಎಂಬುದಾಗಿ ಗುರುತಿಸಲಾಗಿದೆ.
ಈ ಇಬ್ಬರನ್ನು ಕಾಲ್ತುಳಿತ ಘಟನೆಯಲ್ಲಿ ಗಾಯಗೊಂಡ ಬಳಿಕ ಪ್ರಯಾಗ್ ರಾಜ್ ನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೇ ಕಾಲ್ತುಳಿತ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಂತ ಇಬ್ಬರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಅಂದಹಾಗೇ ಮೂರು ದಿನಗಳ ಹಿಂದೆ ಸಾಯಿರಥ ಟ್ರಾವೆಲ್ಸ್ ಏಜೆನ್ಸಿಯ ಮೂಲಕ 13 ಜನರ ತಂಡವು ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವಂತ ಮಹಾ ಕುಂಭಮೇಳಕ್ಕೆ ಬೆಳಗಾವಿಯಿಂದ ತೆರಳಿತ್ತು.
“ನಾನು ಅದೇ ನೀರನ್ನ ಕುಡಿಯುತ್ತೇನೆ” : ಎಎಪಿಯ ‘ವಿಷಕಾರಿ ಯಮುನಾ’ ಆರೋಪಕ್ಕೆ ‘ಪ್ರಧಾನಿ ಮೋದಿ’ ತಿರುಗೇಟು
ದೆಹಲಿಯಲ್ಲಿ ಎಎಪಿ-ಕಾಂಗ್ರೆಸ್ ಚುನಾವಣೋತ್ತರ ಮೈತ್ರಿ ಸಾಧ್ಯತೆ : ಮೋದಿ ಎಚ್ಚರಿಕೆ