ಮಂಗಳೂರು : ಸ್ಕೂಟರ್ ಬಿಡುಗಡೆಗೆ ಪೊಲೀಸ್ ಠಾಣೆಯ ಸಿಪಿಐ ಒಬ್ಬರು ಸ್ಕೂಟರ್ ಮಾಲೀಕರ ಬಳಿ 5,000 ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಮಂಗಳೂರು ಉತ್ತರ ಠಾಣೆಯಲ್ಲಿ ನಡೆದಿದೆ.
ಹೌದು ನ್ಯಾಯಾಲಯದಲ್ಲಿ ಸ್ಕೂಟರ್ ಪಡೆದುಕೊಳ್ಳಲು ಅನುಮತಿ ಸಿಕ್ಕಿದ್ದರೂ, ಸ್ಕೂಟರ್ ಮಾಲಕರಿಂದ ಮಂಗಳೂರು ಉತ್ತರ ಠಾಣೆಯ ಸಿಪಿಐ ಮಹಮ್ಮದ್ ಶರೀಫ್ ಕೆ. 5 ಸಾವಿರ ರೂ. ಲಂಚಕ್ಕಾಗಿ ಬೇಡಿಕೆಯಿಟ್ಟಿದ್ದು, ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಲಂಚದ ಹಣದಲ್ಲಿ ಚೌಕಾಶಿ ನಡೆಸಿ ನಿರೀಕ್ಷಕರು ಹಾಗೂ ಸಿಬಂದಿ 3 ಸಾವಿರ ರೂ. ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಮಾಡಿ ದಾಳಿ ನಡೆಸಲಾಗಿದ್ದು, ಸಿಐ ಮಹಮ್ಮದ್ ಶರೀಫ್ ಕೆ. ಮತ್ತು ಎಚ್ಸಿ ಪ್ರವೀಣ್ ನಾಯ್ಕ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.