ಗದಗ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಅಟ್ಟಹಾಸ ಮಿತಿ ಮೀರಿದ್ದು, ಇದೀಗ ಬ್ಯಾಂಕ್ ನವರು ಸಾಲ ತೀರಿಸಿಲ್ಲ ಎಂದು ಮನೆ ಸೀಸ್ ಮಾಡಿದ್ದಾರೆ. ಇದರಿಂದ ನೊಂದ ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಹೌದು ಬ್ಯಾಂಕ್ನಿಂದ ಮನೆ ಸೀಜ್ ಮಾಡಿದಕ್ಕೆ ಯುವಕ ಆತ್ಮಹತ್ಯೆಗೆ ಯತ್ನಯತ್ನಿಸಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಈ ಒಂದು ಘಟನೆ ನಡೆದಿದೆ. ರಂಭಾಪುರಿ ಆಶ್ರಯ ಬಡಾವಣೆಯ ರವಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಎಂದು ತಿಳಿದು ಬಂದಿದ್ದು, ಮನೆಯನ್ನು ಸೀಜ್ ಮಾಡಿದ್ದಕ್ಕೆ ಯುವಕರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಸ್ವಸ್ಥಗೊಂಡ ರವಿಯನ್ನು ತಕ್ಷಣ ತಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
2017ರಲ್ಲಿ ರವಿ 7 ಲಕ್ಷ ಸಾಲ ಪಡೆದಿದ್ದ, ಆಶ್ರಯ ಮನೆ ಕಟ್ಟಿಸಿಕೊಳ್ಳಲು ಬ್ಯಾಂಕ್ನಿಂದ ಲೋನ್ ಪಡೆದಿದ್ದ ಎನ್ನಲಾಗಿದೆ. ಮೂರು ವರ್ಷದವರೆಗೆ 2 ಲಕ್ಷ ರೂಪಾಯಿ ಸಾಲವನ್ನು ತೀರಿಸಿದ್ದ ರವಿ ಕುಟುಂಬ. ಇನ್ನು 5 ಲಕ್ಷ ಬಾಕಿ ಇದೆ ಎಂದು ಬ್ಯಾಂಕ್ನಿಂದ ನೋಟಿಸ್ ನೀಡಲಾಗಿತ್ತು. ಕೋವಿಡ್ ಬಳಿಕ ಕಂತು ಕಟ್ಟಲಾಗದೆ 1 ಲಕ್ಷ ಮಾತ್ರ ಬಾಕಿ ಉಳಿದಿತ್ತು. ಒಂದು ಲಕ್ಷ ಬಾಕಿಗೆ ಇಡಿ ಮನೆ ಸೀಜ್ ಮಾಡಿದ್ದಾರೆ.