ಹುಬ್ಬಳ್ಳಿ : ಒಂದು ಕಡೆ ಶಾಸಕ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಶ್ರೀರಾಮುಲು ಅವರ ನಡುವೆ ಬಿರುಕು ಮೂಡಿದ್ದು, ಇನ್ನೊಂದು ಕಡೆ ಶ್ರೀರಾಮುಲು ಅವರು ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂಬ ವದಂತಿ ಹರಡಿದೆ. ಈ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾರ್ಡ್ ಪ್ರತಿಕ್ರಿಯೆ ನೀಡಿದ್ದು ಶ್ರೀರಾಮುಲು ಅವರು ನನ್ನ ಸ್ನೇಹಿತ. ಕಾಂಗ್ರೆಸ್ ಪಕ್ಷಕ್ಕೆ ಬಂದರೆ ವೈಯಕ್ತಿಕವಾಗಿ ನಾನು ಸ್ವಾಗತ ಕೋರುತ್ತೇನೆ ಎಂದು ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀರಾಮುಲು ನನ್ನ ಸ್ನೇಹಿತ ಅವರ ಬಗ್ಗೆ ನನಗೆ ಗೌರವವಿದೆ.ರಾಮುಲು ನಮ್ಮ ಪಕ್ಷಕ್ಕೆ ಬಂದರೆ ವೈಯಕ್ತಿಕವಾಗಿ ಸ್ವಾಗತ ಕೋರುತ್ತೇನೆ. ಈ ಕುರಿತಂತೆ ಸಿಎಂ ಮತ್ತು ಪಕ್ಷದ ಅಧ್ಯಕ್ಷರು ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಚುನಾವಣೆಗೆ ಮುನ್ನ ರಾಮುಲು ಅವರನ್ನು ಡಿಕೆ ಶಿವಕುಮಾರ್ ಸಂಪರ್ಕ ಮಾಡಿದ ವಿಚಾರವಾಗಿ ಡಿಕೆ ಶಿವಕುಮಾರ್ ಸಂಪರ್ಕ ಮಾಡಿರುವ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ನಮ್ಮ ಅಧ್ಯಕ್ಷರು ಸಂಪರ್ಕ ಮಾಡಿದ್ದರೂ ಮಾಡಿರಬಹುದು ನಾನು ಬೇರೆ ಪಕ್ಷದಲ್ಲಿ ಇದ್ದರೂ ಕೂಡ ಶ್ರೀರಾಮುಲು ಅವರ ಬಗ್ಗೆ ನನಗೆ ಗೌರವವಿದೆ. ರಾಮಲು ಬಡವರ ಪರವಾಗಿ ಇರುವಂತಹ ನಾಯಕ ರಾಮುಲು ನಮ್ಮ ಪಕ್ಷಕ್ಕೆ ಬಂದರೆ ಒಳ್ಳೆಯದಾಗುತ್ತದೆ ಎಂದರು.