ಬಳ್ಳಾರಿ : ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಇದೀಗ ಬಿರುಕು ಮೂಡಿದೆ. ಜನಾರ್ದನ ರೆಡ್ಡಿ ವಿರುದ್ಧ ಶ್ರೀರಾಮುಲು ಬೆಂಬಲಿಗರು ದೂರು ನೀಡಿರುವ ವಿಚಾರವಾಗಿ ಇಂದು ಬಳ್ಳಾರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ನಾನು ಸಿಬಿಐ ನಂತಹ ಕೇಸ್ ಗಳನ್ನು ನೋಡಿದ್ದೇನೆ ಇದಕ್ಕೆಲ್ಲ ಜಗ್ಗುವುದಿಲ್ಲ ಬಗ್ಗುವುದಿಲ್ಲ ಎಂದು ಮತ್ತೆ ಗುಡುಗಿದ್ದಾರೆ.
ಬಳ್ಳಾರಿಯಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಶ್ರೀರಾಮುಲು ಬೆಂಬಲಿಗರು ಎಸ್ಪಿಗೆ ದೂರು ನೀಡಿರುವ ವಿಚಾರವಾಗಿ ನಾನು ಸಿಬಿಐ ಅಂತಹ ಕೇಸ್ ಗಳನ್ನು ನೋಡಿದ್ದೇನೆ. ಇದನ್ನೆಲ್ಲ ಲೆಕ್ಕ ಇಡಲ್ಲ. ಇಂಥದಕ್ಕೆಲ್ಲಾ ನಾನು ಜಗ್ಗಲ್ಲ ಹೆದರಲ್ಲ. ಆಸ್ತಿ ವಿಚಾರಕ್ಕೆ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ವಹಿ ಮನಸು ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಯಾವುದು ಸಹ ರಹಸ್ಯವಾಗಿ ಉಳಿಯಲ್ಲ ನಿಧಾನವಾಗಿ ಎಲ್ಲ ವಿಷಯ ಗೊತ್ತಾಗುತ್ತದೆ ಎಂದರು.
ನಾನು ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ. ವರಿಷ್ಠರು ಸೂಚನೆ ಕೊಟ್ಟಿದ್ದಾರೆ ನಾನು ಅಲ್ಲೇ ಮಾತನಾಡುತ್ತೇನೆ. ಏನೇ ಇದ್ದರೂ ಪಕ್ಷದ ಚೌಕಟ್ಟಿನಲ್ಲೇ ವರಿಷ್ಠರ ಮುಂದೆಯೇ ಚರ್ಚಿಸುತ್ತೇನೆ. ನಾನು ಬಳ್ಳಾರಿಯಲ್ಲಿಯೇ ಇರುತ್ತೇನೆ, ಸಮಯ ಬಂದಾಗ ಎಲ್ಲವು ಗೊತ್ತಾಗುತ್ತದೆ. ಮನೆಯ ಕಾಂಪೌಂಡ್ ಗೇಟ್ ಕ್ಲೋಸ್ ಮಾಡಿರುವ ವಿಚಾರವಾಗಿ. ವಾಸ್ತು ಹೆಸರಲ್ಲಿ ಅಲ್ವಾ ವಾಸ್ತು ಸರಿ ಇಲ್ಲ ಅಂತ ಹೇಳಿದ್ಮೇಲೆ. ಅದನ್ನ ನಾವಾಗಲಿ ನೀವಾಗಲಿ ಸರಿ ಮಾಡಿಕೊಳ್ಳಲೇಬೇಕಲ್ಲವಾ ಎಂದು ತಿಳಿಸಿದರು.