ಚಾಮರಾಜನಗರ : ಚಾಮರಾಜನಗರದಲ್ಲಿ ಬೆಚ್ಚಿ ಬೆಳಿಸುವಂತಹ ಘಟನೆ ನಡೆದಿದ್ದು ಕೆಎಸ್ಆರ್ಟಿಸಿ ಬಸ್ ನಲ್ಲಿ ಪ್ರಯಾಣಿಸಿದ ಮಹಿಳೆಯರುಗಳು ಅಚಾನಕ್ಕಾಗಿ ಬಸ್ಸಿನ ಕಿಟ್ಟಿ ಹೊರಗಡೆ ತಲೆ ಹಾಕಿದ್ದಾಳೆ. ಈ ವೇಳೆ ಪಕ್ಕದಲ್ಲಿ ವೇಗವಾಗಿ ಬಂದಂತಹ ಲಾರಿ ಒಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯ ದೇಹದಿಂದ ರುಂಡ ಕಟ್ ಆಗಿ ಬಿದ್ದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಹೌದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಿಂದ ನಂಜನಗೂಡು ಕಡೆಗೆ ಹೊರಟ್ಟಿದ್ದ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಅಚಾನಕ್ ಆಗಿ ತಮ್ಮ ತಲೆಯನ್ನು ಕಿಟಕಿಯಿಂದ ಹೊರ ಹಾಕಿದ್ದ ವೇಳೆ ಮುಂಭಾಗದಿಂದ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆಯ ದೇಹದಿಂದ ರುಂಡ ಬೇರ್ಪಟ್ಟಿದೆ.
ಕೆಎಸ್ಆರ್ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ತಲೆ ಪೀಸ್ ಆಗಿದೆ. ಬಸ್ ಕಿಟಕಿಯಿಂದ ತಲೆ ಆಚೆ ಹಾಕಿದರಿಂದ ಈ ವೇಳೆ ವೇಗವಾಗಿ ಬಂದಂತಹ ಗೂಡ್ಸ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯ ತಲೆ ಕಟ್ ಆಗಿದೆ. ಮೃತರನ್ನು ಹಾಲಹಳ್ಳಿ ನಿವಾಸಿ ಶಿವಲಿಂಗಮ್ಮ (58) ಎಂದು ತಿಳಿದುಬಂದಿದ್ದು, ಸ್ಥಳದಲ್ಲಿ ಅವರು ಸಾವನ್ನಪ್ಪಿದ್ದಾರೆ.ಘಟನಾ ಸ್ಥಳಕ್ಕೆ ಗುಂಡ್ಲುಪೇಟೆ ತಾಲೂಕಿನ ಪೊಲೀಸರು ಭೇಟಿ ನೀಡಿದ್ದು ತನಿಖೆ ಕೈಗೊಂಡಿದ್ದಾರೆ.