ಬೆಂಗಳೂರು : ಬೆನ್ನು ನೋವಿನಿಂದ ಬಳಲುತ್ತಿದ್ದ ನಟ ದರ್ಶನ್ ಗೆ ಸದ್ಯಕ್ಕೆ ಆಪರೇಷನ್ ಮಾಡಲಾಗುವುದಿಲ್ಲ. ಅವರಿಗೆ ಕೊಟ್ಟ ಎಪಿಡೂರಲ್ ಇಂಜಕ್ಷನ್ ವರ್ಕ್ ಆಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.
ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದ ದರ್ಶನ್ ಅವರಿಗೆ ಸರ್ಜರಿ ಮಾಡಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದರು. ಆದರೆ ಕಳೆದ ವಾರ ಕೊಟ್ಟ ಎಪಿಡೂರಲ್ ಇಂಜಕ್ಷನ್ ವರ್ಕ್ ಆಗಿದ್ದು, ದರ್ಶನ್ ಬೆನ್ನು ನೋವಿನಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು, ಸದ್ಯಕ್ಕೆ ಬೆನ್ನು ನೋವಿನ ಆಪರೇಷನ್ ಬೇಡ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.
ಬೆನ್ನು ನೋವಿನ ಹಿನ್ನೆಲೆಯಲ್ಲಿ ನಟ ದರ್ಶನ್ ಗೆ ಈಗಾಗಲೇ ಹಲವು ಟೆಸ್ಟ್ ಗಳನ್ನು ನಡೆಸಲಾಗಿದ್ದು, ಬೆನ್ನು ನೋವಿಗೆ ಆಪರೇಷನ್ ಮಾಡಲೇಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ ಇದೀಗ ನಟ ದರ್ಶನ್ ಇಂಜಕ್ಷನ್ ನೀಡಿದ್ದು, ವರ್ಕ್ ಆಗಿದೆ ಹೀಗಾಗಿ ಸದ್ಯಕ್ಕೆ ಆಪರೇಷನ್ ಮಾಡದಿರಲು ವೈದ್ಯರು ನಿರ್ಧರಿಸಿದ್ದಾರೆ ಎನ್ನಲಾಗಿದೆ.