ಯಾದಗಿರಿ : ಒಂದು ಕಡೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳದಿಂದ ಬೇಸತ್ತು ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನರು ತಮ್ಮ ಮನೆ ಬಿಟ್ಟು ಊರನ್ನೇ ತೊರೆಯುತ್ತಿದ್ದಾರೆ. ಇನ್ನೊಂದು ಕಡೆ ಮೀಟರ್ ಬಡ್ಡಿ ದಂಧೆಗೆ ಹಲವರು ಸಾಲಗಾರರ ಕಿರುಕುಳಕ್ಕೆ ಒಳಗಾಗಿದ್ದು ಇನ್ನೂ ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಇದೀಗ ಯಾದಗಿರಿಯಲ್ಲಿ ಕೊಟ್ಟ ಸಾಲ ಮರುಪಾವತಿಸುವುದಕ್ಕೆ ತಡವಾಗಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಆದರೆ ಚಿಕಿತ್ಸೆ ಫಲಿಸಿದೆ ಯುವಕ ಸಾವನಪ್ಪಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ
ಹೌದು ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸಕ್ಕೆ ಯುವಕನೊಬ್ಬ ಬಲಿಯಾದ ಘಟನೆ ಯಾದಗಿರಿ ನಗರದ ಲಾಡೇಜಗಲ್ಲಿಯಲ್ಲಿ ನಡೆದಿದೆ. ಮೃತ ಯುವಕನನ್ನು ಖಾಸೀಂ ಅಲಿಯಾಸ್ ಬಿಲ್ಲಿ ಎಂದು ತಿಳಿದುಬಂದಿದೆ. ಈತ ಯಾಸೀನ್ ಎನ್ನುವವನ ಬಳಿ 35 ಸಾವಿರ ರೂ ಸಾಲ ಪಡೆದಿದ್ದನಂತೆ, ಮರು ಪಾವತಿಸುವುದು ತಡವಾಗಿದ್ದಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದನಂತೆ. ಹಲ್ಲೆಗೆ ಒಳಗಾದ ಖಾಸಿಂ ಅನ್ನು ಕಲ್ಬುರ್ಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಸಲ್ಲಿಸಿದೆ ಖಾಸಿಂ ಇದೀಗ ಸಾವನಪ್ಪಿದ್ದಾನೆ.
ಯಾಸಿನ್ ಬಳಿ 35 ಸಾವಿರ ಪಡೆದುಕೊಂಡ ಬಳಿಕ ಖಾಸಿಂ ನಿಗದಿಪಡಿಸಿದ ದಿನಾಂಕದ ಒಳಗೆ ಹಣ ಪಾವತಿಸಿಲ್ಲ. ಇದರಿಂದ ಯಾಸಿನ್ ಖಾಸಿಂ ಮೇಲೆ ಬಾರುಕೋಲಿನಿಂದ ಹಾಗೂ ಮೊಣಕಾಲಿನಿಂದ ಒದ್ದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ. ತಕ್ಷಣ ಖಾಸಿಂ ಕುಟುಂಬಸ್ಥರು ಆತನನ್ನು ಕಲ್ಬುರ್ಗಿ ನಗರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು ಆದರೆ ಚಿಕಿತ್ಸೆಫಲಿಸದೆ ಖಾಸಿಂ ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಇದೀಗ ಯಾದಗಿರಿ ನಗರ ಠಾಣೆ ಪೋಲೀಸರು ಯಾಸಿನ್ ನನ್ನು ಅರೆಸ್ಟ್ ಮಾಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.