ಉಡುಪಿ : ರಾಜ್ಯದಲ್ಲಿ ಒಂದು ಕಡೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳದಿಂದ ಬೇಸತ್ತು ಹಲವರು ಬೀದಿಗೆ ಬಂದರೆ, ಇನ್ನೂ ಕೆಲವರು ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಉಡುಪಿಯಲ್ಲಿ ಬಡ್ಡಿ ದಂಧೆಕೊರರ ಅಟ್ಟಹಾಸ ಮಿತಿಮೀರಿದು, ಯಕ್ಷಗಾನ ಕಲಾವಿದನೊಬ್ಬನಿಗೆ ಸಾಲ ನೀಡಿದ ವ್ಯಕ್ತಿ ಬಾರುಕೋಲಿನಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾರೆ.
ಹೌದು ಉಡುಪಿಯಲ್ಲಿ ಬಡ್ಡಿ ದಂಧೆಕೊರರ ಅಟ್ಟಹಾಸ ಮಿತಿ ಮೀರಿದ್ದು, ಯಕ್ಷಗಾನ ಕಲಾವಿದನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ವರದಿಯಾಗಿದೆ.ಯಕ್ಷಗಾನ ಕಲಾವಿದ ನಿತೀನ್ ಗೆ ಸಚಿನ್ ಎನ್ನುವ ವ್ಯಕ್ತಿ ಸಾಲ ನೀಡಿದ್ದ. 20 ಪರ್ಸೆಂಟ್ ಬಡ್ಡಿಗೆ 1.80 ಲಕ್ಷ ಸಚಿನ್ ಸಾಲ ನೀಡಿದ್ದ. ಸಾಲಕ್ಕೆ ಕಲಾವಿದ ಬಡ್ಡಿ ಕಟ್ಟಿ ಬೇಸತ್ತಿದ್ದ.
ಈಗ ಬಡ್ಡಿ ಕಟ್ಟುತ್ತಿದ್ದರು ಬಡ್ಡಿ ನೀಡಿಲ್ಲ ಎಂದು ಸಚಿನ್ ಹಲ್ಲೆ ನಡೆಸಿದ್ದಾನೆ. ಸಾಲ ವ್ಯವಹಾರದಲ್ಲಿ ಭಿನ್ನಮತ ಮೂಡಿ ಗಲಾಟೆ ನಡೆದಿದೆ. ಕಂಬಳದ ಬಾರ್ಕೋಲಿನಲ್ಲಿ ಈ ಒಂದು ಭೀಕರ ಹಲ್ಲೆ ನಡೆದಿದೆ. ಕಾರಿನಲ್ಲಿ ಉದ್ಯಾವರಕ್ಕೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಲಾಗಿದೆ. ಪಡುಬಿದ್ರಿ ಆಸ್ಪತ್ರೆಯಲ್ಲಿ ಸದ್ಯ ನಿತಿನ್ ಚಿಕಿತ್ಸೆ ಪಡೆಯುತ್ತಿದ್ದಾರೆ.