ಬೆಂಗಳೂರು : ಅರಣ್ಯಗಳಲ್ಲಿ ಚಲನಚಿತ್ರ ಚಿತ್ರೀಕರಣದ ವೇಳೆ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ ಎಂದು ರಾಜ್ಯ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಖಡಕ್ ಸೂಚನೆ ನೀಡಿದ್ದಾರೆ.
ರಿಷಬ್ ಶೆಟ್ಟಿ ನಟನೆಯ ಕಾಂತಾರ ಟು ಚಿತ್ರೀಕರಣದ ವೇಳೆ ಅರಣ್ಯದಲ್ಲಿ ಪಟಾಕಿ ಸ್ಫೋಟಿಸಿ ನಿಯಮ ಉಲ್ಲಂಘನೆ ಮಾಡಿದ್ದರು. ಈ ವಿಚಾರವಾಗಿ ಇದೀಗ ಈಶ್ವರ ಖಂಡ್ರೆ ಅವರು ಅರಣ್ಯದಲ್ಲಿ ಯಾವುದೇ ಚಲನಚಿತ್ರ ಮಾಡುವ ವೇಳೆ ರಾಜ್ಯ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ ಎಂದು ಖಡಕ್ ಸೂಚನೆ ನೀಡಿದ್ದಾರೆ.
ಕಾಂತಾರ-2 ಸಿನೆಮಾಗೆ ಬಿಗ್ ರಿಲೀಫ್
ಹಾಸನ ಜಿಲ್ಲೆಯ ಸಕಲೇಶಪುರದ ಹೆರೂರು ಅರಣ್ಯದಲ್ಲಿ ಜನವರಿ 2 ರಿಂದ ಕಾಂತಾರ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಈ ವೇಳೆ ಚಿತ್ರೀಕರಣಕ್ಕಾಗಿ ಗೋಮಾಳ ಜಾಗಕ್ಕೆ ಪರವಾನಿಗೆ ಪಡೆದಿರುವ ಚಿತ್ರ ತಂಡ ಕಾಡಿಗೆ ಬೆಂಕಿ ಹಚ್ಚಿ ನಾಶ ಪಡಿಸುತ್ತಿದೆ ಎಂದು ಆರೋಪಿಸಲಾಗಿತ್ತು.
ಈ ಕುರಿತು ಈಶ್ವರ್ ಖಂದ್ರ್ ಅರಣ್ಯ ಭೂಮಿಯಲ್ಲಿ ನಿಯಮ ಉಲ್ಲಂಘನೆ ಆಗಿಲ್ಲ ಎಂಬುದು ಪ್ರಾಥಮಿಕ ವರದಿ. ಆದರೂ ಸಂಪೂರ್ಣ ವರದಿ ಸಲ್ಲಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮಾಧ್ಯಮಗಳಲ್ಲಿ ಬಂದ ವರದಿಯ ಅನ್ವಯ ಸೂಚನೆ ಕೊಟ್ಟಿದ್ದೇನೆ. ನಿಯಮಗಳ ಪ್ರಕಾರ ಅನುಮತಿ ಕೊಡಲಾಗಿತ್ತು. ಆದರೆ, ಅದು ಕಂದಾಯ ಭೂಮಿ, ಗೋಮಾಳ ಎನ್ನಲಾಗಿದೆ. ಅರಣ್ಯ ಭೂಮಿಯಲ್ಲಿ ಉಲ್ಲಂಘನೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ ಯಸಳೂರು ಭಾಗದಲ್ಲಿ ಕಾಂತಾರ ಸಿನಿಮಾದ ಶೂಟಿಂಗ್ ಗಾಗಿ ತಾತ್ಕಾಲಿಕವಾಗಿ ಸೆಟ್ ನಿರ್ಮಾಣ ಮಾಡಲು ಜ.3 ರಿಂದ ಜ.15 ರವರೆಗೆ ಅವಕಾಶ ನೀಡಲಾಗಿತ್ತು. ಜೊತೆಗೆ ಜ.15 ರಿಂದ ಜ.25 ರ ವರೆಗೆ 23 ದಿನ ಶೂಟಿಂಗ್‌ಗೆ ಅವಕಾಶ ನೀಡಲಾಗಿದೆ. ಆದರೆ, ಕಾಂತಾರ ಚಿತ್ರತಂಡ ಕಾಡಿನಂಚಿನ ಅರಣ್ಯ ಪ್ರದೇಶದ ಬಳಿ ನಡೆಸುತ್ತಿರುವ ಚಿತ್ರೀಕರಣದ ವೇಳೆ ಸ್ಫೋಟಕ ಬಳಕೆಯ ಬಗ್ಗೆ ಆರೋಪ ಕೇಳಿಬಂದಿತ್ತು.