ತುಮಕೂರು : ಕಳೆದ 50 ವರ್ಷಗಳ ಹಿಂದೆ ಕಾರಣಾಂತರಗಳಿಂದ ನಿಲ್ಲಿಸಿದ್ದ ಮಧುಗಿರಿ ತೆಪ್ಪೋತ್ಸವ ಇಂದು ಮತ್ತೆ ಆರಂಭವಾಗಲಿದ್ದು, ಇಂದು ತುಮಕೂರು ಜಿಲ್ಲೆಯ ಮಧುಗಿರಿಯ ಚೋಳೇನಹಳ್ಳಿ ಯಲ್ಲಿ ಕೆರೆಯಲ್ಲಿ ತೆಪ್ಪೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಅಲ್ಲದೇ ಸಂಜೆ 7:00ಗೆ ಗೋಧೋಳಿ ಲಗ್ನದಲ್ಲಿ ಗಂಗಾವತಿ ನಡೆಯಲಿದೆ. ಕಾಶಿಯಿಂದ ಆಗಮಿಸಿರುವ ಸುಮಾರು 40 ಪಂಡಿತರಿಂದ ಗಂಗಾವತಿ ನಡೆಯಲಿದ್ದು, ಈ ಹಿಂದೆ 1974 ರಲ್ಲಿ ಮಧುಗಿರಿ ತಕ್ಕೋತ್ಸವ ನಡೆದಿತ್ತು. 50 ವರ್ಷಗಳಿಂದ ಕಾರಣಾಂತರಗಳಿಂದ ಈ ಒಂದು ತಪೋತ್ಸವವನ್ನು ಕೈ ಬಿಡಲಾಗಿತ್ತು.ಇದೀಗ ಸಹಕಾರ ಸಚಿವ ಕೆ ಎನ್ ರಾಜಣ್ಣ ಅಧ್ಯಕ್ಷತೆ ಹಾಗೂ ಎಂಎಲ್ಸಿ ರಾಜೇಂದ್ರ ರಾಜಣ್ಣ ನೇತೃತ್ವದಲ್ಲಿ ತೆಪ್ಪೋತ್ಸವ ಆಯೋಜನೆ ಮಾಡಲಾಗಿದೆ.
ಇಂದು ಸಂಜೆ 7:30 ರಿಂದ ರಾತ್ರಿ 10 ಗಂಟೆಯವರೆಗೆ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ತೆಪ್ಪೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್, ಕೇಂದ್ರ ಸಚಿವ ವಿ ಸೋಮಣ್ಣ, ಸಿದ್ದಗಂಗಾ ಮಠದ ಶ್ರೀಗಳು, ಸಿದ್ದರಬೆಟ್ಟದ ಶ್ರೀಗಳು ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ. ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಭದ್ರತೆಗೆ 600ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.