ಬಾಗಲಕೋಟೆ : ಇತ್ತೀಚಿಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಬೇಸತ್ತು ಹಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದೀಗ ಇಂತಹದ್ದೇ ಘಟನೆ ಬಾಗಲಕೋಟೆಯಲ್ಲಿ ನಡೆದಿದ್ದು, ವಿಪರೀತ ಸಾಲದಿಂದ ಬೇಸತ್ತು ವೃದ್ಧ ದಂಪತಿಗಳು ಇಬ್ಬರು ಬ್ರಿಡ್ಜ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘೋರ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ನಡೆದಿದೆ.
ಮೃತ ದಂಪತಿಗಳನ್ನು ಮಲ್ಲಪ್ಪ ಲಾಳಿ (56) ಹಾಗೂ ಪತ್ನಿ ಮಹಾದೇವಿ (51) ಎಂದು ತಿಳಿದುಬಂದಿದೆ.ಕಳೆದ 15 ವರ್ಷಗಳಿಂದ ಮೆಟಗುಡ್ಡ ಗ್ರಾಮದಲ್ಲಿ ವಾಸವಾಗಿದ್ದ ದಂಪತಿಗಳು ಅದೇ ಗ್ರಾಮದಲ್ಲಿ ಕಿರಾಣಿ ಅಂಗಡಿ ನಡೆಸ್ತಿದ್ದರು, ಫೈನಾನ್ಸ್ಗಳಲ್ಲಿ, ಖಾಸಗಿ ವ್ಯಕ್ತಿಗಳ ಬಳಿಯಲ್ಲಿ ಸಾಕಷ್ಟು ಸಾಲ ಮಾಡಿದ್ದರು. ಜೊತೆಗೆ ಇಬ್ಬರು ಹೆಣ್ಣು ಮಕ್ಕಳ ಮದುವೆಗಾಗಿಯೂ ಸಾಲ ಮಾಡಿದ್ದರು.
ಈ ರೀತಿ ವಿಪರೀತವಾಗಿ ದಂಪತಿಗಳು ಸಾಲ ಮಾಡಿದ್ದರು ಆದರೆ ಸಾಲ ತೀರಿಸಲು ಪರದಾಡುತ್ತಿದ್ದರು ಇದರಿಂದ ಬೇಸತ್ತ ದಂಪತಿಗಳು ಮುಧೋಳ ತಾಲೂಕಿನ ಯಾದವಾಡ ಬ್ರಿಡ್ಜ್ಗೆ ನೇಣು ಹಾಕಿಕೊಂಡು ದಂಪತಿಗಳು ಸೂಸೈಡ್ ಮಾಡಿಕೊಂಡಿದ್ದು. ಸ್ಥಳದಲ್ಲೆ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಲೋಕಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.